ಉಪ್ಪಿನಂಗಡಿ: ಸಾರ್ವಜನಿಕ ರಸ್ತೆ ಅಗೆತ- ದಂಡ

0

ಉಪ್ಪಿನಂಗಡಿ: ಸಾರ್ವಜನಿಕ ರಸ್ತೆಯನ್ನು ಸ್ಥಳೀಯಾಡಳಿತದ ಅನುಮತಿ ಪಡೆಯದೇ ಕಡಿದು ಸಂಚಾರಕ್ಕೆ ತಡೆಯೊಡ್ಡಿದ ಘಟನೆಗೆ ಸಂಬಂಧಿಸಿ ಪಂಚಾಯತ್ ಆಡಳಿತವು ದಂಡ ವಿಧಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಇಲ್ಲಿನ ರಾಷ್ಟ್ರಿಯ ಹೆದ್ದಾರಿಯಿಂದ ನಟ್ಟಿಬೈಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೋರಿ ಅಳವಡಿಸುವ ಕಾರಣಕ್ಕೆ ರಸ್ತೆಯನ್ನು ಕಡಿದು ಮೋರಿ ಅಳವಡಿಸಲು ಸ್ಥಳೀಯರೊಬ್ಬರು ಮುಂದಾಗಿದ್ದರು. ಇದರಿಂದಾಗಿ ರಸ್ತೆಯಲ್ಲಿ ವಾಹನ ಸಂಚರಿಸುವುದು ಅಸಾಧ್ಯವಾಗಿ ಸಾರ್ವಜನಿಕರಿಂದ ಪಂಚಾಯತ್ ಆಡಳಿತಕ್ಕೆ ದೂರುಗಳು ಸಲ್ಲಿಸಲ್ಪಟ್ಟಿತ್ತು. ದೂರಿಗೆ ತಕ್ಷಣವೇ ಸ್ಪಂದಿಸಿದ ಪಂಚಾಯತ್ ಪಿಡಿಒ ರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪಂಚಾಯತ್ ಆಡಳಿತದ ಗಮನಕ್ಕೆ ತಾರದೇ , ಅಗತ್ಯ ಅನುಮತಿಯನ್ನೂ ಪಡೆಯದೆ ಸಾರ್ವಜನಿಕ ಆಸ್ತಿಯಾದ ರಸ್ತೆಯನ್ನು ಕಡಿದು ಹಾನಿಗೊಳಿಸಿದ ಕೃತ್ಯಕ್ಕೆ 10,000 ರೂಪಾಯಿ ದಂಡ ವಿಧಿಸಿ , ರಸ್ತೆಯನ್ನು ಪುನರಪಿ ಸಂಚಾರಯೋಗ್ಯವನ್ನಾಗಿಸುವಂತೆ ಷರತ್ತು ವಿಧಿಸಿದರು.

LEAVE A REPLY

Please enter your comment!
Please enter your name here