ಸಿನಿಪ್ರೇಕ್ಷಕರ ಹೃದಯ ಗೆದ್ದಂತಹ ತುಳು ಚಿತ್ರ ‘ತುಡರ್’ – ಹೌಸ್‌ಫುಲ್ ಪ್ರದರ್ಶನದೊಂದಿಗೆ ಚಿತ್ರ 3ನೇ ವಾರಕ್ಕೆ

0

ಪುತ್ತೂರು: ಪುರುಷರ, ಮಹಿಳೆಯರ, ವಿದ್ಯಾರ್ಥಿ-ವಿದ್ಯಾರ್ಥಿನಿಯರ, ಮಕ್ಕಳ ಬಾಯಲ್ಲಿ ಒಂದೇ ಮಾತು. ಅದು ತುಳು ಸಿನೆಮಾ ‘ತುಡರ್’ ಚಿತ್ರದ ಕುರಿತು. ತುಳು ಚಿತ್ರರಂಗದಲ್ಲಿಯೇ ವಿನೂತನ ಶೈಲಿಯ, ಸ್ಯಾಂಡಲ್‌ವುಡ್, ಕಾಲಿವುಡ್, ಬಾಲಿವುಡ್ ಸಿನೆಮಾಗಳಂತೆ ಅದ್ದೂರಿತನದಲ್ಲಿ ನಿರ್ಮಾಣಗೊಂಡ ರಿಚ್ ಮಾಸ್ ಸಿನೆಮಾ, ಸಿನಿಪ್ರೇಕ್ಷಕರ ಹೃದಯ ಗೆದ್ದಂತಹ ಪ್ರೀತಿಯ ಸಿನೆಮಾ ತುಡರ್ ಚಿತ್ರವು ಇದೀಗ ಕರುನಾಡಿನಾದ್ಯಂತ ಭರ್ಜರಿ ಪ್ರದರ್ಶನಗೊಂಡು ಮೂರನೇ ವಾರದತ್ತ ಮುನ್ನುಗ್ಗುತ್ತಿದೆ.
‘ದ ಫೈರ್ ವಿಥ್ ಇನ್’ ಟ್ಯಾಗ್‌ಲೈನ್ ಹೊಂದಿರುವ ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ಅದ್ದೂರಿ ತಾರಾಗಣದ “ತುಡರ್’ ತುಳು ಸಿನೆಮಾ ಜೂ.14ರಂದು ಕರುನಾಡಿನಾದ್ಯಂತ ತೆರೆ ಕಂಡಿದೆ. ಪುತ್ತೂರಿನ ಭಾರತ್ ಸಿನೆಮಾಸ್‌ನಲ್ಲಿ ಪ್ರತಿದಿನ ನಾಲ್ಕು ದೇಖಾವೆಯಂತೆ ಚಿತ್ರವು ಪ್ರದರ್ಶನಗೊಳ್ಳುತ್ತಿದ್ದು ಪ್ರೇಕ್ಷಕರು ಮುಗಿಬಿದ್ದು ಚಿತ್ರವನ್ನು ವೀಕ್ಷಿಸುತ್ತಿದ್ದು, ತುಳು ಚಿತ್ರರಂಗದ
ಬಾಕ್ಸಾಫೀಸ್ ಚಿಂದಿ ಉಡಾಯಿಸುವತ್ತ ದೌಡಾಯಿಸುತ್ತಿದೆ. ಈಗಾಗಲೇ ಚಿತ್ರದ ಪ್ರೀಮಿಯರ್ ಶೋ ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದು, ಚಿತ್ರವು ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನೆಮಾಸ್, ಪಿವಿಆರ್, ಸಿನೆಪೊಲಿಸ್, ಸುರತ್ಕಲ್‌ನಲ್ಲಿ ಸಿನೆಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಭಾರತ್ ಸಿನೆಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನೆಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನೆಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನೆಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಸಿನಿಪ್ರೇಕ್ಷಕರ ಅದ್ಭುತ ಕತರಾಡತನದೊಂದಿಗೆ ಪ್ರದರ್ಶನಗೊಳ್ಳುತ್ತಿದೆ.

ಕುಟುಂಬ ಸಮೇತರಾಗಿ ನೋಡುವ ಚಿತ್ರವು ಇದಾಗಿದ್ದು ,ಚಿತ್ರವು ಸುಮಾರು ರೂ.2ಕೋಟಿ ವೆಚ್ಚದಲ್ಲಿ ಸ್ಯಾಂಡಲ್‌ವುಡ್, ಕಾಲಿವುಡ್, ಬಾಲಿವುಡ್ ಸಿನೆಮಾಗಳಂತೆ ಅದ್ದೂರಿತನದಲ್ಲಿ ನಿರ್ಮಾಣಗೊಂಡಿದೆ. ಚಿತ್ರದ ನಾಯಕನಟ ಸಿದ್ಧಾರ್ಥ್ ಶೆಟ್ಟಿ, ನಾಯಕಿನಟಿ ದೀಕ್ಷಾ ಭೀಷೆ, ತುಳುನಾಡಿನ ಮಾಣಿಕ್ಯ ಅರವಿಂದ್ ಬೋಳಾರ್, ಪ್ರಜ್ವಲ್ ಬಂಬ್ರಾಣ, ಹರ್ಷಿತಾ ಶೆಟ್ಟಿ, ಅನ್ವಿತ ಸಾಗರ್, ಸದಾಶಿವ ಅಮೀನ್, ಮೈತಿದಿ ಖ್ಯಾತಿಯ ರೂಪಾ ವರ್ಕಾಡಿ, ನಮಿತಾ ಕೂಳೂರು, ಉಮೇಶ್ ಮಿಜಾರ್, ಅಶೋಕ್ ಬಿ.ರವರಂತಹ ಪ್ರಖ್ಯಾತ ಕಲಾವಿದರು ಸಿನೆಮಾದಲ್ಲಿ ಲೀಲಾಜಾಲವಾಗಿ ಅಭಿನಯಿಸಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿವಿಗೆ ಇಂಪಾಗಿಸುವ ಸಂಗೀತ, ಮೈನವಿರೇಳಿಸುವ ಲೋಕೇಶನ್ಸ್, ಉತ್ತಮ ಕಥೆ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕರಾದ ವಿಲ್ಸನ್ ರೆಬೆಲ್ಲೊ, ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಬಂಡವಾಳ ಹೂಡಿದ್ದಾರೆ. ತೇಜೇಶ್ ಪೂಜಾರಿ ಹಾಗೂ ಎಲ್ಸನ್ ಮಸ್ಕರೇನ್ಹಸ್ ನಿರ್ದೇಶಕರಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ ಮೋಹನ್‌ರಾಜ್ ಅವರದ್ದು.
ತುಳು ಚಿತ್ರರಂಗದ ಬಹು ನಿರೀಕ್ಷೆಯ, ಸಾಮಾಜಿಕ, ಸಾಂಸಾರಿಕ, ಸಸ್ಪೆನ್ಸ್ ಹಾಗೂ ಅದ್ದೂರಿ ತಾರಾಗಣದ ಮಾಸ್ ಸಿನೆಮಾ “ತುಡರ್” ಚಿತ್ರವನ್ನು ಹಲವರು ಎರಡು, ಮೂರು ಬಾರಿ ವೀಕ್ಷಿಸಿದ್ದಾರೆ. ಯಾರು ವೀಕ್ಷಿಸಿಲ್ಲ, ಅವರೆಲ್ಲರೂ ಚಿತ್ರವನ್ನು ಆದಷ್ಟು ಬೇಗನೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಕುಟುಂಬಸಮೇತರಾಗಿ ವೀಕ್ಷಿಸಿ, ತುಳು ಚಿತ್ರರಂಗವನ್ನು ಪ್ರೋತ್ಸಾಹಿಸಿ ಎಂದು ಚಿತ್ರದ ನಾಯಕನಟ ಸಿದ್ಧಾರ್ಥ್ ಶೆಟ್ಟಿ ಹಾಗೂ ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುತ್ತೂರಿನ ಭಾರತ್ ಸಿನೆಮಾಸ್‌ನಲ್ಲಿ ದಿನಾ 4 ದೇಖಾವೆ ಬೆಳಿಗ್ಗೆ 10.30, ಮಧ್ಯಾಹ್ನ 1.15, ಸಂಜೆ 4.೦೦, ರಾತ್ರಿ 7.30

LEAVE A REPLY

Please enter your comment!
Please enter your name here