ಹೊಸ ಕಾಯ್ದೆಯ ಉದ್ದೇಶ ಅರಿಯುವುದು ಉತ್ತಮ-ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ
ಪುತ್ತೂರು:ಯಾವುದೇ ಕಾಯ್ದೆ ಜಾರಿಗೆ ಬಂದಾಗ ಅದರ ಉದ್ದೇಶ ಏನು ಎಂಬುದನ್ನು ಅರಿಯುವುದು ಬಹಳ ಉತ್ತಮ ಎಂದು ಮಂಗಳೂರು ವಿಭಾಗದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಅವರು ಹೇಳಿದರು.
ಜು.1ರಿಂದ ಜಾರಿಗೆ ಬರಲಿರುವ ಹೊಸ ಅಪರಾಧ ಕಾನೂನುಗಳ ಕುರಿತು, ವಕೀಲರು ತಮ್ಮ ಕೌಶಲ್ಯ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪುತ್ತೂರು ವಕೀಲರ ಸಂಘದಿಂದ ಜೂ.28ರಂದು ನ್ಯಾಯಾಲಯ ಸಂಕೀರ್ಣದ ಪರಾಶರ ಹಾಲ್‌ನಲ್ಲಿ ನಡೆದ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.ಹೊಸ ಕಾಯ್ದೆಗಳನ್ನು ವಕೀಲರು ಹೆಚ್ಚು ಅಧ್ಯಯನ ಮಾಡುವುದು ಉತ್ತಮ.ಇದರ ಜೊತೆಗೆ ವಕೀಲರಿಗೆ ಪೊಲೀಸರ ಅಗತ್ಯತೆಯೂ ಇದೆ ಎಂದು ಹೇಳಿದ ಅವರು ಸಿಆರ್‌ಪಿಸಿ ಮತ್ತು ಹೊಸ ಕಾನೂನುಗಳ ಪ್ರಮುಖ ವಿಚಾರಗಳ ಕುರಿತು ಮಾಹಿತಿ ನೀಡಿದರು.
5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶೆ ಸರಿತಾ ಡಿ ಕಾರ್ಯಾಗಾರವನ್ನು ಉದ್ಘಾಟಿಸಿದರು.ಕಾಸರಗೋಡಿನ ನ್ಯಾಯವಾದಿ ಕೆ.ಅಬ್ದುಲ್ ನಾಸೀರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಜಿ.ಅವರು ಅಧ್ಯಕ್ಷತೆ ವಹಿಸಿದ್ದರು.ನ್ಯಾಯಾಧಿಶರುಗಳಾದ ಅರ್ಚನಾ ಉನ್ನಿತಾನ್, ಶಿವಣ್ಣ, ನಾಗೇಂದ್ರ ಶೆಟ್ಟಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಆರ್.ಆಚಾರ್ಯ, ಮನೋಹರ್ ಕೆ.ವಿ, ಸಂಘದ ಉಪಾಧ್ಯಕ್ಷ ಮೋನಪ್ಪ, ಜೊತೆ ಕಾರ್ಯದರ್ಶಿ ಮಮತಾ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲೆ ಸ್ವಾತಿ ಜೆ.ರೈ ಅತಿಥಿಗಳನ್ನು ಪರಿಚಯಿಸಿದರು.ವನಿತಾ ಪ್ರಾರ್ಥಿಸಿದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ಸ್ವಾಗತಿಸಿ, ಕೋಶಾಽಕಾರಿ ಮಹೇಶ್ ಕೆ ಸವಣೂರು ವಂದಿಸಿದರು.ದೀಪಕ್ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು.