ಸೈನ್ಸ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು:ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ನಡೆಸುತ್ತಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪರೀಕ್ಷೆಗಳಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ಚಿನ್ನ ಹಾಗೂ ಕಂಚಿನ ಪದಕಗಳು ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.  

 2023-24ನೇ  ಸಾಲಿನ ಒಲಿಂಪಿಯಾಡ್  ಪರೀಕ್ಷೆಗಳಲ್ಲಿ ಒಂದನೇ ತರಗತಿಯ ರಿಷಿಕ್ ಆರ್ ಮೇಲoಟ, ಆಶ್ವಿ ಅವಿನಾಶ್ ಮತ್ತು ಬ್ರಾಹ್ಮಿ ಶೆಟ್ಟಿಯವರು ಇಂಟರ್ನ್ಯಾಷನಲ್ ಮ್ಯಾಥಮೆಟಿಕ್ಸ್ ಒಲಿಂಪಿಯಾಡ್ನಲ್ಲಿ ಮೊದಲ ರ‍್ಯಾಂಕ್ ಆರುಷ್ ಎ ಶೆಟ್ಟಿ  ಇಂಟರ್ನ್ಯಾಷನಲ್ ಜನರಲ್ ನಾಲೆಜ್ ಒಲಂಪಿಯಾಡ್ ನಲ್ಲಿ ಹತ್ತನೇ ರ‍್ಯಾಂಕ್, ತಶ್ವಿ ಡಿ.ವಿ  ಇಂಟರ್ನ್ಯಾಷನಲ್ ಜನರಲ್ ನಾಲೆಜ್  ಒಲಿಂಪಿಯಾಡ್ ನಲ್ಲಿ 21ನೇ ರ‍್ಯಾಂಕ್, ಕಾರ್ತಿಕ್ ಎಲ್.ಎನ್ ಇಂಟರ್ನ್ಯಾಷನಲ್ ಜನರಲ್ ನಾಲೆಜ್ ಒಲಿಂಪಿಯಾಡ್ ನಲ್ಲಿ 57ನೇ  ರ‍್ಯಾಂಕ್, ಎಂಟನೇ ತರಗತಿಯ ಸೃಜನ್ ನ್ಯಾಷನಲ್ ಸೈಬರ್ ಒಲಿಂಪಿಯಾಡ್ ನಲ್ಲಿ 383ನೇ ರ‍್ಯಾಂಕ್,  ಎಂಟನೇ ತರಗತಿಯ ಯತೀನ್ ಬಿ. ಎಸ್ ಇಂಟರ್ನ್ಯಾಷನಲ್ ಸೋಶಿಯಲ್ ಸ್ಟಡೀಸ್ ಒಲಿಂಪಿಯಾಡ್ ನಲ್ಲಿ 147ನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

LEAVE A REPLY

Please enter your comment!
Please enter your name here