Inspire Award ಸ್ಪರ್ಧೆ: ವಿವೇಕಾನಂದ ಆ.ಮಾ ಶಾಲೆಯ ಪ್ರೀತಿ ಪ್ರಭು ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಪುತ್ತೂರು:ಭಾರತ ಸರಕಾರದ ಅಧೀನದಲ್ಲಿರುವ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗ ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಗತಿಗೋಸ್ಕರ ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಲು ಇನ್‌ಸ್ಪಾಯರ್ ಸ್ಪರ್ಧೆಗಳನ್ನು [Inspire Award] ದೇಶಾದ್ಯಂತವಿರುವ ಶಾಲೆಗಳಲ್ಲಿ ಆಯೋಜಿಸಿತ್ತು.

ಎಲ್ಲಾ ಪಠ್ಯಕ್ರಮಗಳ ಶಾಲೆಗಳ ವಿದ್ಯಾರ್ಥಿಗಳಿಗೆ ಭಾಗವಹಿಸುವ ಮುಕ್ತ ಅವಕಾಶವಿರುವ ಸ್ಪರ್ಧೆಯಾಗಿದ್ದುಲಕ್ಷಾಂತರ ವಿದ್ಯಾರ್ಥಿಗಳು ಆರಂಭಿಕ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ. 2ನೇ ಹಂತದಲ್ಲಿ ಆಯಾಯ ರಾಜ್ಯ ಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದುರಾಜ್ಯದಿಂದ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರಮಟ್ಟದ ಸ್ಪರ್ಧೆಗೆ ಕರ್ನಾಟಕ ರಾಜ್ಯದಿಂದ 39 ಮಂದಿ ಆಯ್ಕೆಯಾಗಿದ್ದುದಕ್ಷಿಣ ಕನ್ನಡದಿಂದ ನಾಲ್ಕು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಅವರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರೀತಿ ಪ್ರಭು ಒಬ್ಬರಾಗಿದ್ದು, 9ನೇ ತರಗತಿಯಲ್ಲಿ ಓದುತ್ತಿದ್ದುಮುಕ್ರಂಪಾಡಿ ನಿವಾಸಿ ಕೆ.ಪಿ.ಟಿ.ಸಿ.ಎಲ್‌ನ ಉದ್ಯೋಗಿ ಪುಂಡಲಿಕ ಪ್ರಭು ಮತ್ತು ನಾಗಮಣಿ ಪಿ ಪ್ರಭು ದಂಪತಿಗಳ ಪುತ್ರಿಯಾಗಿರುತ್ತಾರೆ. ಇವರು ರಚಿಸಿದ “DWIPRATHI TWO LANE FULLY AUTOMATIC SEED SOWING MACHINE”  ಎಂಬ ವಿಜ್ಞಾನ ಮಾದರಿಯು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here