ಗೃಹರಕ್ಷಕ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ

0

ಗೃಹ ರಕ್ಷಕರು ಆಪತ್ಬಾಂಧವರು – ಕೃಷ್ಣವೇಣೀಪ್ರಸಾದ್ ಮುಳಿಯ

ಪುತ್ತೂರು: ಯಾರೆ ಇರಲಿ ಕಷ್ಟ ಕಾಲದಲ್ಲಿ ಅವರಿಗೆ ಆಪತ್ಬಾಂಧವರಂತೆ ಗೃಹರಕ್ಷಕರು ರಕ್ಷಣಾ ಸೇವೆ ನೀಡುತ್ತಾರೆ ಎಂದು ಮುಳಿಯ ಜ್ಯುವೆಲ್ಸ್‌ನ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಹೇಳಿದರು.
ಗೃಹರಕ್ಷಕದಳ ಪುತ್ತೂರು ಘಟಕದ ವತಿಯಿಂದ ಜೂ.30ರಂದು ನಡೆದ ಗೃಹರಕ್ಷಕ ಸಿಬ್ಬoದಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹಕರಕ್ಷಕದಳದವರು ದೇವರಿಗೆ ಸಮಾನರು. ಅವರ ರಕ್ಷಣಾ ಸೇವೆ ಎಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಸಿಗುತ್ತದೆ ಎಂದರು.


ಸನ್ಮಾನ:
ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಪಿ. ಜಗನ್ನಾಥ ರವರಿಗೆ ಮತ್ತು ಲಘು ಮತ್ತು ಪ್ರವಾಹ ರಕ್ಷಣೆ ಯಲ್ಲಿ ಚಿನ್ನದ ಪದಕ ಪಡೆದ ಕೇಶವ ಏನ್ ರವರನ್ನು ಸಮಾದೇಷ್ಟ ಡಾ ಮುರಲೀ ಮೋಹನ್ ಚೂಂತಾರು ಮತ್ತು ಅಧ್ಯಕ್ಷತೆ ವಹಿಸಿದ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಸನ್ಮಾನಿಸಿದರು.
ಸಮಾದೇಷ್ಟ ಡಾ ಚೂಂತಾರು ಮಾತನಾಡಿ ಪುತ್ತೂರು ಘಟಕದ ಸಿಬ್ಬಂದಿಗಳಿಗೆ ನೆಲೆಯಿಲ್ಲದೆ ಇದ್ದು ,ಮುಂದಿನ ದಿನಗಳಲ್ಲಿ ನೆಲೆ ಸಿಗುವುದಕ್ಕೆ ಇಲಾಖೆ ವತಿಯಿಂದ ಪ್ರಯತ್ನಿಸುತ್ತೇವೆ ಮತ್ತು ಮುಖ್ಯಮಂತ್ರಿ ಚಿನ್ನದಪದಕ ಪಡೆಯುವುದು ತುಂಬಾ ಕಷ್ಟಕರ ವಿಷಯ ಆದ್ದರಿಂದ ಪ್ರಯತ್ನ ನಮ್ಮದು ಪ್ರತಿಫಲ ದೇವರದ್ದು ಎಂಬ ವಿಚಾರವನ್ನ ತಿಳಿಸಿದರು ಹಾಗೂ ಪುತ್ತೂರು ಘಟಕದ ಗ್ರಹರಕ್ಷಕ ಸಿಬ್ಬಂದಿಗಳು ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದು ನಮ್ಮ ಇಲಾಖೆಯಲ್ಲಿ ನಿಷ್ಠೆಯಿಂದ ಕರ್ತವ್ಯನಿರ್ವಹಿಸುತ್ತಿದ್ದಾರೆ ಎಂದರು. ಘಟಕಾಧಿಕಾರಿ ಅಭಿಮನ್ಯು ರೈ, ಹಿರಿಯ ಗೃಹರಕ್ಷಕರಾದ ಸುದರ್ಶನ್ ಜೈನ್, ಸೈಯದ್ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here