ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ನಾಯಕಿಯಾಗಿ ಹಿತೈಷಿ ಕೆ.ಎ. 7ನೇ, ಉಪನಾಯಕಿಯಾಗಿ ಖುಷಿ ಜೆ.ಎಸ್.6ನೇ ಆಯ್ಕೆಯಾಗಿದ್ದಾರೆ.
ಸಭಾಪತಿಯಾಗಿ ಅಭೀಕ್ಷಾ 7ನೇ, ಶಿಕ್ಷಣ ಮಂತ್ರಿಯಾಗಿ ಹೇಮಲತಾ 7ನೇ, ವಾಹನ ಮಂತ್ರಿಯಾಗಿ ತೃಷಾ 7ನೇ, ಸಾಂಸ್ಕೃತಿಕ ಮಂತ್ರಿಯಾಗಿ ಲಕ್ಷ್ಮೀ 7ನೇ, ತೋಟಗಾರಿಕಾ ಮಂತ್ರಿಯಾಗಿ ಚೇತನ್‌ಕುಮಾರ್ 7ನೇ, ಕ್ರೀಡಾಮಂತ್ರಿಯಾಗಿ ಸಾನ್ವಿ 7ನೇ, ಶೋಧನಾ ಮಂತ್ರಿಯಾಗಿ ಅನ್ವಿತಾ 7ನೇ, ರಕ್ಷಣಾ ಮಂತ್ರಿಯಾಗಿ ಹಿತೇಶ್ 7ನೇ, ಸ್ವಚ್ಛತಾ ಮಂತ್ರಿಯಾಗಿ ಆರಾಧ್ಯ 7ನೇ, ಆಹಾರ ಮಂತ್ರಿಯಾಗಿ ದೀಕ್ಷಾ 7ನೇ, ಗ್ರಂಥಾಲಯ ಮಂತ್ರಿಯಾಗಿ ಉಷಾ 7ನೇ, ವಿರೋಧ ಪಕ್ಷದ ನಾಯಕನಾಗಿ ನಿಶಾಂತ್ 7ನೇ ಆಯ್ಕೆಯಾದರು.
ಶಾಲಾ ಮಂತ್ರಿಮಂಡಲದ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಜೂ.22ರಂದು ನಡೆಯಿತು. ಶಾಲಾ ಮುಖ್ಯಗುರು ಎ.ಲಕ್ಷ್ಮಣ ಗೌಡರವರು ರಾಜ್ಯಪಾಲರಾಗಿ ನೂತನವಾಗಿ ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಧನಂಜಯ ಪುಯಿಲರವರು ಮಾತನಾಡಿ, ಎಳೆಯ ವಯಸ್ಸಿನ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು. ಇನ್ನೋರ್ವ ಅತಿಥಿ ಸುರೇಶ್ ಬಿದಿರಾಡಿ ಶುಭ ಹಾರೈಸಿದರು. ನೂತನವಾಗಿ ಆಯ್ಕೆಗೊಂಡ ಮಂತ್ರಿಗಳಿಗೆ ಅವರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಸಹಶಿಕ್ಷಕಿ ವಂದನಾ ಅವರು ತಿಳಿಸಿದರು. ಸಹಶಿಕ್ಷಕಿ ರಮ್ಯಾಶ್ರೀ ಸ್ವಾಗತಿಸಿ, ಭಾಗ್ಯಲಕ್ಷ್ಮೀ ವಂದಿಸಿದರು. ಮಹಾಲಕ್ಷ್ಮೀ ನಿರೂಪಿಸಿದರು.