ಬೊಳುವಾರಿನ ತಮನ್ವಿ ಸಿಲ್ಕ್ಸ್ ಸಾರೀಸ್ ಮಳಿಗೆಯಲ್ಲಿ ಡಿಸ್ಕೌಂಟ್ ಸೇಲ್

0

ಪುತ್ತೂರು: ಸಿಲ್ಕ್ ಮತ್ತು ಸಾರಿಗಳು ಅಂದರೆ ಮಹಿಳೆಯರಿಗೆ ಯಾವಾಗಲೂ ಅಚ್ಚಮೆಚ್ಟು. ಎಷ್ಟು ಸಾರಿ ಖರೀದಿಸಿದರೂ ಮಹಿಳೆಯರಿಗೆ ಸಾಕು ಎನಿಸುವುದಿಲ್ಲ. ವಿವಿಧ ವಿನ್ಯಾಸದ ಉಡುಪುಗಳ ಖರೀದಿಗೆ ಮಹಿಳೆಯರು ಮುಗಿಬೀಳುತ್ತಾರೆ. ಅದರಲ್ಲೂ ಮುಂಗಾರಿನ ಮಳೆಯ ಸಂಭ್ರಮದೊಂದಿಗೆ ಖರೀದಿಯ ಅನುಭವವೇ ವಿಭಿನ್ನ. ಮಹಿಳೆಯರಿಗೆ ಇಂತಹದೊಂದು ಅವಕಾಶವನ್ನು ಬೊಳುವಾರಿನ ತಮನ್ವಿ ಸಿಲ್ಕ್ಸ್ ಮತ್ತು ಸಾರೀಸ್ ಮಳಿಗೆ ನೀಡುತ್ತಿದೆ.


ಬೊಳುವಾರಿನ ಮುಖ್ಯರಸ್ತೆಯ ಇನ್‌ಲ್ಯಾಂಡ್ ಮಯೂರ ಬಿಲ್ಡಿಂಗ್‌ನಲ್ಲಿ ಕಳೆದ 9 ತಿಂಗಳಿನಿಂದ ಕಾರ್ಯಾಚರಿಸುತ್ತಿರುವ ತಮನ್ವಿ ಸಿಲ್ಸ್ಕ್ ಮತ್ತು ಸಾರೀಸ್‌ನಲ್ಲಿ ಮಾನ್ಸೂನ್ ಪ್ರಯುಕ್ತ ಡಿಸ್ಕೌಂಟ್ ಸೇಲ್ ಜೂ.29ರಿಂದ ಆರಂಭವಾಗಿದೆ. ಸಾರಿಗಳ ಖರೀದಿಯಲ್ಲಿ ಶೇ.20ರಷ್ಟು ಮತ್ತು ಸಲ್ವಾರ್‌ಗಳ ಖರೀದಿಯಲ್ಲಿ ಶೇ.15ರಷ್ಟು ಡಿಸ್ಕೌಂಟನ್ನು ಆಯೋಜಿಸಿದೆ. ಸಾರಿಗಳ ಬೆಲೆ ರೂ.250ರಿಂದ ಹಾಗೂ ಟಾಪ್‌ಗಳ ಬೆಲೆ ರೂ.299ರಿಂದ ಆರಂಭಗೊಳ್ಳಲಿದೆ. ದುಪ್ಪಟ್ಟಾ, ಸಾರಿ ಶೇಪರ್, ಇನ್ನರ್‌ವೇರ್, ರೇಷ್ಮೆ ಸಿಲ್ಕ್, ಸೆಮಿ ಸಿಲ್ಕ್, ಬ್ರೈಡಲ್ ಸಾರಿ, ಕಾಟನ್ ಸಿಲ್ಕ್ ಸಾರಿಗಳು, ಬನಾರಸ್ ಸಾರಿಗಳು, ಸಲ್ವಾರ್ ಸೇರಿದಂತೆ ಮಹಿಳೆಯರ ವಿವಿಧ ಉಡುಪುಗಳು ಲಭ್ಯವಿದೆ. ವಿವಿಧ ವಿನ್ಯಾಸದ, ಕಡಿಮೆ ಬೆಲೆಯ ಉಡುಪುಗಳನ್ನು ಖರೀದಿಸಲು ಮಹಿಳೆಯರಿಗೆ ಅವಕಾಶವಿವದೆ. ಡಿಸ್ಕೌಂಟ್ ಸೇಲ್ ಕೆಲವೇ ದಿನಗಳು ಮಾತ್ರ ಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಲಕ ವಿಜೇತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here