ರೋಟರಿ ಕ್ಲಬ್ ಪುತ್ತೂರು ಸಿಟಿ-ಅಧ್ಯಕ್ಷ: ಅಧ್ಯಕ್ಷ:ಮೊಹಮ್ಮದ್ ಸಾಹೇಬ್,ಕಾರ್ಯದರ್ಶಿ:ರಾಮಚಂದ್ರ,ಕೋಶಾಧಿಕಾರಿ:ದಯಾನಂದ ಕೆ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಸಾಹೇಬ್, ಕಾರ್ಯದರ್ಶಿಯಾಗಿ ರಾಮಚಂದ್ರ, ಕೋಶಾಧಿಕಾರಿಯಾಗಿ ಎಸ್.ದಯಾನಂದ ಕೆ.ರವರು ಆಯ್ಕೆಯಾಗಿದ್ದಾರೆ.


ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಗ್ರೇಸಿ ಗೊನ್ಸಾಲ್ವಿಸ್, ಉಪಾಧ್ಯಕ್ಷರಾಗಿ ಉಮೇಶ್ಚಂದ್ರ ಬಿ, ಜೊತೆ ಕಾರ್ಯದರ್ಶಿಯಾಗಿ ಮೋಹನ್ ಮುತ್ಲಾಜೆ, ಸಾರ್ಜಂಟ್ ಎಟ್ ಆರ್ಮ್ಸ್ ಜ್ಯೋ ಡಿ’ಸೋಜ, ಕ್ಲಬ್ ಸರ್ವಿಸ್ ನಿರ್ದೇಶಕ ಧರ್ಣಪ್ಪ ಗೌಡ, ವೊಕೇಶನಲ್ ಸರ್ವಿಸ್ ನಿರ್ದೇಶಕಿ ಸ್ವಾತಿ ಮಲ್ಲಾರ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಪ್ರಜ್ವಲ್ ರೈ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ನಟೇಶ್ ಉಡುಪ, ಯೂತ್ ಸರ್ವಿಸ್ ನಿರ್ದೇಶಕ ಗುರುರಾಜ್ ಕೆ, ಚೇರ್‌ಮ್ಯಾನ್‌ಗಳಾಗಿ ಮೊಹಮದ್ ಸಾದಿಕ್(ಟಿ.ಆರ್.ಎಫ್), ಡಾ.ಪೊಡಿಯ(ಸಿಎಲ್‌ಸಿಸಿ), ಡಾ.ಶಶಿಧರ್ ಕಜೆ(ಪಲ್ಸ್ ಪೋಲಿಯೋ), ಶ್ರೀಮತಿ ಶ್ಯಾಮಲಾ ಪಿ.ಶೆಟ್ಟಿ(ಟೀಚ್), ಪ್ರಮೋದ್ ಮಲ್ಲಾರ(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಪಿ.ಉಲ್ಲಾಸ್ ಪೈ(ವಿನ್ಸ್), ಮನೋಹರ್ ಕೆ(ಎಥಿಕ್ಸ್), ಸುರೇಂದ್ರ ಕಿಣಿ(ಪಬ್ಲಿಕ್ ರಿಲೇಷನ್), ಕೃಷ್ಣಮೋಹನ್ ಪಿ.ಎಸ್(ಕೆರಿಯರ್ ಗೈಡೆನ್ಸ್), ಸುನಿತ್ ಕುಮಾರ್(ಸ್ಪೋರ್ಟ್ಸ್), ಅಕ್ಷತಾ ಪಿ.ಶೆಣೈ(ವೆಬ್‌ಸೈಟ್), ಪ್ರಶಾಂತ್ ಶೆಣೈ(ಜಿಲ್ಲಾ ಪ್ರಾಜೆಕ್ಟ್ಸ್), ಮೊಹಮದ್ ಆರಿಫ್(ವಾಟರ್ & ಸ್ಯಾನಿಟೇಶನ್), ಜಯಗುರು ಆಚಾರ್(ರೋಟರ‍್ಯಾಕ್ಟ್), ಜೋನ್ ಕುಟಿನ್ಹಾ(ಇಂಟರ‍್ಯಾಕ್ಟ್), ಡಾ.ಹರಿಕೃಷ್ಣ ಪಾಣಾಜೆ(ಬುಲೆಟಿನ್ ಎಡಿಟರ್), ಗುರುರಾಜ್ ಕೆ(ಬುಲೆಟಿನ್-ಸಬ್ ಎಡಿಟರ್)ರವರು ಆಯ್ಕೆಯಾಗಿದ್ದಾರೆ.


ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೊಹಮದ್ ಸಾಹೇಬ್‌ರವರು ಬಪ್ಪಳಿಗೆ ಪಿ.ಬಿ.ಅಬ್ದುಲ್ಲಾ ಮತ್ತು ಸೆಲ್ಮಾ ದಂಪತಿ ಪುತ್ರನಾಗಿದ್ದು, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ರಾಗಿಕುಮೇರು ಶಾಲೆ, ಬಸ್‌ಸ್ಟ್ಯಾಂಡ್ ಬಳಿಯ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ 7ನೇ ತರಗತಿ, ಕೊಂಬೆಟ್ಟು ಸರಕಾರಿ ಜ್ಯೂ.ಕಾಲೇಜಿನಲ್ಲಿ 8 ರಿಂದ ಪಿಯುಸಿ, ಫಿಲೋಮಿನಾ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪೂರೈಸಿದರು. ಬಳಿಕ ದಿ.ಮಮ್ಮುಂಞ ಹಾಜಿಯವರು ಪ್ರಾರಂಭಿಸಿದ ಅನಾಥ ಮತ್ತು ಬಡ ನಿರ್ಗತಿಕರ ಸಂರಕ್ಷಿಸುವ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಆರಂಭಿಸಿ ಪ್ರಸ್ತುತ ಇದು ಈಗ ಸಾಲ್ಮರದಲ್ಲಿ ಅನ್ಸಾರುದ್ದೀನ್ ಅನಾಥಾಲಯವಾಗಿ ಮುಂದುವರಿಯುತ್ತಿದೆ. 1979ರ ಜುಲೈಯಲ್ಲಿ ಕೆನರಾ ಬ್ಯಾಂಕಿನ ಉದ್ಯೋಗಿಯಾಗಿ ನೇಮಕಗೊಂಡು ಬೆಂಗಳೂರಿನಲ್ಲಿ ಸೇವೆಯನ್ನು ಆರಂಭಿಸಿ, ಬಳಿಕ ಮಂಗಳೂರಿನ ಬಲ್ಮಠದಲ್ಲಿ, ಪುತ್ತೂರು, ಮಡಿಕೇರಿ ಮತ್ತು ಮುಂಬಯಿಯಲ್ಲಿ ಕೆಲಸ ನಿರ್ವಹಿಸಿದರು. ಮಂಗಳೂರಿನಲ್ಲಿರುವಾಗ CAIIB ಪರೀಕ್ಷೆಯನ್ನು ಪೂರೈಸಿ, ಮುಂಬೈಯಲ್ಲಿ ಸತತ ಮೂರು ವರ್ಷ ಸೇವೆ ಸಲ್ಲಿಸಿ SNRS ಸ್ಕೀಮಿನಲ್ಲಿ 2001ನೇ ಇಸವಿಯಲ್ಲಿ ಸ್ವಯಂ ನಿವೃತ್ತಿ ಹೊಂದಿದರು. ಬಳಿಕ ತಾಯ್ನಾಡಿನಲ್ಲಿ ಕುಟುಂಬದವರ ಜೊತೆ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ವಿವಿಧ ಸಂಸ್ಥೆಗಳಲ್ಲಿ ಸೇವೆಗೈದರು. 2003ರಲ್ಲಿ ರೋಟರಿ ಭೀಷ್ಮ ಕೆ.ಆರ್.ಶೆಣೈಯವರ ಮುಖೇನ ರೋಟರಿ ಈಸ್ಟ್‌ನಿಂದ ಸ್ಥಾಪಿಸಲ್ಪಟ್ಟ ರೋಟರಿ ಸಿಟಿಯ ಸ್ಥಾಪಕ ಕಾರ್ಯದರ್ಶಿಯಾಗಿ, ಸಕ್ರಿಯ ಸದಸ್ಯರಾಗಿ ಮುಂದುವರಿದಿರುತ್ತಾರೆ. 2010ರಲ್ಲಿ ಪುತ್ತೂರಿನ ಸಾಲ್ಮರದಲ್ಲಿರುವ ಮೌಂಟನ್‌ವ್ಯೂ ಇಂಗ್ಲೀಷ್ ಮಾಧ್ಯಮ ಶಾಲೆಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಇವರು ಪತ್ನಿ ಸಕೀನಾ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಹೊಂದಿದ್ದು ಕೂರ್ನಡ್ಕದ ಮುಹ್‌ಸಿನಾ ಮಂಝಿಲ್‌ನಲ್ಲಿ ವಾಸ್ತವ್ಯ ಹೊಂದಿದ್ದಾರೆ.


ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ರಾಮಚಂದ್ರರವರು ದಿ.ಹೊನ್ನಪ್ಪ ಮತ್ತು ದಿ.ರಾಮಕ್ಕ ದಂಪತಿ ಪುತ್ರನಾಗಿ ಬಜತ್ತೂರು ಗ್ರಾಮದ ಶಿಬಾರ್ಲ ಎಂಬಲ್ಲಿ ಜನಿಸಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಜತ್ತೂರಿನ ಸರಕಾರಿ ಶಾಲೆ, ಪ್ರೌಢ ಶಿಕ್ಷಣವನ್ನು ಎಸ್.ಆರ್‌ಎಚ್.ಎಸ್ ರಾಮಕುಂಜ, ಪಿಯು ಶಿಕ್ಷಣವನ್ನು ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ, ಬಿಕಾಂ ಪದವಿಯನ್ನು ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು. ಗ್ರಂಥಾಲಯ ವಿಜ್ಞಾನ ಪದವಿಯನ್ನು ಮಂಗಳೂರು ವಿ.ವಿಯಲ್ಲಿ 1986ರಲ್ಲಿ ಪಡೆದು, 1986 ಡಿಸೆಂಬರ್‌ನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯಲ್ಲಿ ಗ್ರಂಥಪಾಲಕರಾಗಿ ತನ್ನ ಸರಕಾರಿ ಕರ್ತವ್ಯವನ್ನು ಆರಂಭಿಸಿದರು. ತನ್ನ ಉದ್ಯೋಗದ ಜೊತೆಗೆ ಕಾಲೇಜಿನಲ್ಲಿ ಐಕ್ಯೂಎಸಿ ಸಂಯೋಜಕರಾಗಿ, IQAC ಸಂಯೋಜಕರಾಗಿ, ನ್ಯಾಕ್ ಸಂಯೋಜಕರಾಗಿ, ರಕ್ಷಕ-ಶಿಕ್ಷಕ ಸಂಘದ ಇನ್-ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಉಪ್ಪಿನಂಗಡಿ, ಬೆಟ್ಟಂಪಾಡಿ ಹಾಗೂ ಪುತ್ತೂರು ಕಾಲೇಜುಗಳಲ್ಲಿ ಸೇವೆ ನಿರ್ವಹಿಸಿ 2023 ರಂದು ನಿವೃತ್ತರಾಗಿರುತ್ತಾರೆ. ಇವರು ಶ್ರೀ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಬೆಂಗಳೂರು ಯೋಗ ವಿಶ್ವವಿದ್ಯಾನಿಲಯದಿಂದ ಯೋಗ ಇನ್ಸ್ಟ್ರಕ್ಟರ್ ಕೋರ್ಸ್ ಪೂರೈಸಿದ್ದು ಓರ್ವ ಉತ್ತಮ ಯೋಗ ತರಬೇತುದಾರರಾಗಿದ್ದಾರೆ.2009ರಲ್ಲಿ ರೋಟರಿ ಸಿಟಿಗೆ ಸೇರ್ಪಡೆಗೊಂಡು ನಿರ್ದೇಶಕರಾಗಿ, ಬುಲೆಟಿನ್ ಎಡಿಟರ್ ಆಗಿ ಹಾಗೂ ರೋಟರ‍್ಯಾಕ್ಟ್ ಚೇರ್‌ಮ್ಯಾನ್ ಆಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಇವರು ಪತ್ನಿ ಶ್ರೀಮತಿ ಹೇಮಲತಾ, ಪುತ್ರಿ, ಪುತ್ರನೊಂದಿಗೆ ಬನ್ನೂರಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.


ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ದಯಾನಂದ ಕೆ.ಎಸ್‌ರವರು ಸೋಮಪ್ಪ ಗೌಡ ಮತ್ತು ನಾಗವೇಣಿಯ ಪುತ್ರನಾಗಿ ಜನಿಸಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೆರ್ಲಂಪಾಡಿ ಸರಕಾರಿ ಶಾಲೆಯಲ್ಲಿ, ಹೈಸ್ಕೂಲ್ ಹಾಗೂ ಪದವಿ ವಿದ್ಯಾಭ್ಯಾಸವನ್ನು ಫಿಲೋಮಿನಾ ಪ್ರೌಢಶಾಲೆ ಹಾಗೂ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು. ನಂತರ ಹೈದರಾಬಾದ್‌ನ ಉಸ್ಮಾನಿಯಾ ಯುನಿವರ್ಸಿಟಿಯಲ್ಲಿ ಆರ್ಟ್ಸ್ ಆಂಡ್ ಡಿಪ್ಲೋಮಾ ಇನ್ ಟೆಲಿ ಕಮ್ಯೂನಿಕೇಶನ್‌ನಲ್ಲಿ ಪದವಿ ಪಡೆದರು. ವಿದ್ಯಾಭ್ಯಾಸದ ನಂತರ ಇಂಡಿಯನ್ ಏರ್‌ಫೋರ್ಸ್‌ಗೆ ಸೇರಿ ಟೆಲಿಕಮ್ಯೂನಿಕೇಶನ್ ಇಂಜಿನಿಯರ್ ಆಗಿ 15 ವರ್ಷ ಹಾಗೂ ನೆಟ್‌ವರ್ಕ್ ಇಂಜಿನಿಯರ್ ಆಗಿ 4 ವರ್ಷ ಸೇವೆ ಸಲ್ಲಿಸಿದರು. ಏರ್‌ಫೋರ್ಸ್‌ನಿಂದ ನಿವೃತ್ತರಾದ ಬಳಿಕ ಕೋರ್ಪೊರೇಶನ್ ಬ್ಯಾಂಕಿಗೆ ಸೇರಿ ಅಲ್ಲಿ 22 ವರ್ಷ ಸೇವೆ ಸಲ್ಲಿಸಿ ಪ್ರಬಂಧಕರಾಗಿ ನಿವೃತ್ತರಾಗಿದ್ದಾರೆ.

ಜು.2 ರಂದು ಪದ ಪ್ರದಾನ..
ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.2 ರಂದು ಸಾಲ್ಮರ ಕೊಟೇಚಾ ಸಭಾಂಗಣದಲ್ಲಿ ಸಂಜೆ ಜರಗಲಿದ್ದು, ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3180 ಇದರ ಪಿಡಿಜಿ ಮೇಜರ್ ಡೋನರ್ ಎಂ.ಲಕ್ಷ್ಮೀನಾರಾಯಣರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ಗೌರವ ಅತಿಥಿಗಳಾಗಿ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಜಯರಾಮ ರೈ, ವಲಯ ಸೇನಾನಿ ಗ್ರೇಸಿ ಗೊನ್ಸಾಲ್ವಿಸ್‌ರವರು ಭಾಗವಹಿಸಲಿದ್ದಾರೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here