ಕಾವು: ಬುಶ್ರಾ ಆಂಗ್ಲ ಮಾಧ್ಯಮ ಶಾಲಾ ಸಂಸತ್ತು ಚುನಾವಣೆ ಮೂಲಕ ನಡೆಯಿತು.ಶಾಲಾ ಮುಖ್ಯ ಮಂತ್ರಿ ಯಾಗಿ ಹರ್ಷಲ್ ಎಂಎಸ್ 10ನೇ ತರಗತಿ ಇವರು ಆಯ್ಕೆಯಾದರೆ, ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಝಹೀರಾ ಮತ್ತು ಫಾಸಿಲ್ ಇವರು ಆಯ್ಕೆಯಾದರು.
ಪ್ರಾರ್ಥಮಿಕ ವಿಭಾಗದ ಉಪಮುಖ್ಯಮಂತ್ರಿಯಾಗಿ ಫಾತಿಮಾತ್ ಫೈಮಾ 7ನೇ ತರಗತಿ ಇವರು ಚುನಾವಣೆ ಮೂಲಕ ಆಯ್ಕೆಯಾದರೆ ಉಳಿದಂತೆ ಆರೋಗ್ಯ ಮಂತ್ರಿಯಾಗಿ ಜಿತೇಶ್ ಕೆ. ಟಿ ಮತ್ತು ಮಿತೇಶ್ ನಾಯ್ಕ್ ,ವಾರ್ತಾ ಮತ್ತು ಪ್ರಚಾರ ಮಂತ್ರಿಯಾಗಿ ಶೈಮಾ ಮತ್ತು ಅಫ್ಲಾಲ್ ಇವರು ,ಸಾಂಸ್ಕೃತಿಕ ಮಂತ್ರಿಯಾಗಿ ನಶ್ವಿಫಾ ಮತ್ತು ಶಲ್ಮಿ ಹಾಫ್ಸತ್ ಇವರು,ವಿರೋಧ ಪಕ್ಷದ ನಾಯಕರುಗಳಾಗಿ ಸಫಾ ಫಾತಿಮಾ ಮತ್ತು ನಶ್ವ ಅಮೀನ ಇವರು, ಕ್ರೀಡಾ ಮಂತ್ರಿಯಾಗಿ ನಿಹಾಲ್ ಮತ್ತು ಶಮೀಮ್ ಇವರು, ಶಿಕ್ಷಣ ಮಂತ್ರಿಯಾಗಿ ಮುಷೈನ ಮತ್ತು ರೀಫಾ ಇವರು ಸ್ಪೀಕರ್ ಆಗಿ ಫರ್ಹಾನ್ ಇವರನ್ನು ನೇರವಾಗಿ ಆಯ್ಕೆ ಮಾಡಲಾಯಿತು.
ಚುನಾವಣೆಯು ಮುಖ್ಯ ಗುರುಗಳಾದ ದೀಪಿಕಾ ಚಾಕೋಟೆ ಇವರ ಮಾರ್ಗದರ್ಶನದಂತೆ ಮತ್ತು ಚುನಾವಣಾ ಅಧಿಕಾರಿಯಾದ ಉಮೇಶ್ ನಾಯ್ಕ್ ಇವರ ಮುಂದಾಳತ್ವದಲ್ಲಿ ನಡೆಯಿತು… ಎಲ್ಲಾ ಅಧ್ಯಾಪಕ ಮತ್ತು ಅಧ್ಯಾ ಪಕೇತರ ವೃಂದದವರು ಚುನಾವಣಾ ಸಂಸತ್ತಿಗೆ ಸಹಕರಿಸಿದರು.