ಕುಂಡಡ್ಕ: ಬಿಜೆಪಿ ವತಿಯಿಂದ ಜನಸಂಘ ಸ್ಥಾಪಕಾಧ್ಯಕ್ಷ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯ ಸ್ಮರಣೆ

0

ಪಕ್ಷವನ್ನು ಕಟ್ಟಿ ಬೆಳೆಸಿ ತಾಯಿ ಭಾರತಾಂಬೆಗೆ ರಕ್ಷಣೆ ನೀಡೋಣ: ದಯಾನಂದ ಶೆಟ್ಟಿ ಉಜಿರೆ ಮಾರ್

ಬಿಜೆಪಿ ಪಕ್ಷದ ಎಲ್ಲಾ ಕೆಲಸ ಕಾರ್ಯಗಳಿಗೂ ಪ್ರೇರಣೆ ಶ್ಯಾಮ್‌ ಪ್ರಸಾದ್ ಮುಖರ್ಜಿ: ಚಂದ್ರಶೇಖರ ಬಪ್ಪಳಿಗೆ

ವಿಟ್ಲ: ದೇಶದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರೇ ಮಾನವತಾವಾದವನ್ನು ಅಚಲವಾಗಿ ನಂಬಿಕೊಂಡವರು. ಹಿಂದುತ್ವವನ್ನು ಈ ದೇಶದ ಪ್ರತಿಯೊಂದು ಮೂಲೆಗೆ ಉದ್ದೀಪನಗೊಳಿಸುವುದರ ಜೊತೆಗೆ ರಾಷ್ಟ್ರಪ್ರೇಮವನ್ನು ಮೂಡಿಸಿದವರು. ಪಕ್ಷವನ್ನು ಕಟ್ಟಿ ಬೆಳೆಸಿ ತಾಯಿ ಭಾರತಾಂಬೆಗೆ ರಕ್ಷಣೆ ನೀಡುವ ಕೆಲಸನ್ನು‌ ನಾವೆಲ್ಲರು ಮಾಡೋಣ ಎಂದು
ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್ ರವರು ಹೇಳಿದರು.

ಅವರು ಕುಂಡಡ್ಕದಲ್ಲಿರುವ ಇಡ್ಕಿದು ಸೇವಾ ಸಹಕಾರಿ ಸಂಘದ ಶಾಖೆಯ ಸಭಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಜನಸಂಘ ಸ್ಥಾಪಕಾಧ್ಯಕ್ಷ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾರಂಭದ ಹಂತದಲ್ಲಿ ಈ ದೇಶದ ಪರಿಸ್ಥಿತಿಯನ್ನು ಮನಗಂಡು, ಈ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸಬೇಕೆಂದು ಶ್ರಮ ವಹಿಸಿದವರು. ಜನಸಂಘದ ಮೂಲಕ ಭಾರತೀಯ ಜನತಾ ಪಾರ್ಟಿಯನ್ನು ಹುಟ್ಟುಹಾಕಿದವರು, ಇವರ ಈ ಶ್ರಮದ ಫಲವಾಗಿ ಇಂದು ನಾವೆಲ್ಲರೂ ತಾಯಿ ಭಾರತಿಯನ್ನು ಜಗತ್ತಿಗೆ ಗುರುವಾಗಿ ಸ್ವೀಕರಿಸುವ ಕಾಲಘಟ್ಟದಲ್ಲಿ ಇರುವುದು ನಿಜಕ್ಕೂ ತುಂಬಾ ಹೆಮ್ಮೆ ಅಂದು ಅವರು ಗೈದ ಶ್ರಮ, ತ್ಯಾಗ, ಮಾರ್ಗದರ್ಶನದಂತೆ ಇಂದು ನಾವೆಲ್ಲರೂ ಪಕ್ಷವನ್ನು ಇನ್ನಷ್ಟು ಕಟ್ಟಿ ಬೆಳೆಸಿ ತಾಯಿ ಭಾರತಾಂಬೆಗೆ ರಕ್ಷಣೆಯಾಗೋಣ ಎಂದು ಹೇಳಿದರು.

ಪುತ್ತೂರು ಬಿಜೆಪಿ ಮುಖಂಡ ಚಂದ್ರಶೇಖರ ಬಪ್ಪಳಿಗೆರವರು ದೀಪ ಬೆಳಗಿಸಿ ದಿ. ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಇವರು ಭಾರತೀಯ ಜನತಾ ಪಾರ್ಟಿಯ ಎಲ್ಲಾ ಕೆಲಸ ಕಾರ್ಯಗಳಿಗೂ ಪ್ರೇರಣೆ ಶ್ಯಾಮ್‌ ಪ್ರಸಾದ್ ಮುಖರ್ಜಿಯರವರು. ಕಾಶ್ಮೀರಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನ ಗೈದ ಮುಖರ್ಜಿಯವರ ಜೀವಚರಿತ್ರೆಯ ಬಗ್ಗೆ ಅವರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಶಕ್ತಿ ಕೇಂದ್ರ ಪ್ರಮುಖರು ಗೋವಿಂದರಾಜ್, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರೋಹಿಣೆ,ವಿಟ್ಲ ವ್ಯವಸಾಯ ಸೇವಾ ಸಂಘದ ಉಪಾಧ್ಯಕ್ಷರಾದ ಮಹಾಬಲೇಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಸುಮಾರು 60 ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು. ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರಮಾ‌ರ್ ಸ್ವಾಗತಿಸಿ, ಶಕ್ತಿ ಕೇಂದ್ರದ ಪ್ರಮುಖರಾದ ಗೋವಿಂದರಾಜ್ ವಂದಿಸಿದರು.

LEAVE A REPLY

Please enter your comment!
Please enter your name here