ಕಡಬ: ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆಯು ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು.ಶ್ರೀ ದುರ್ಗಾಂಬ ಪ್ರೌಢಶಾಲೆ ಅಲಂಕಾರ್ ಇಲ್ಲಿಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪತಿ ರಾವ್ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಬರಬೇಕು .ವಿದ್ಯಾರ್ಥಿ ಸಂಘವು ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಶಿಸ್ತು ಹಾಗೂ ನಾಯಕತ್ವವನ್ನು ಬೆಳೆಸುತ್ತದೆ. ಪ್ರಜಾಪ್ರಭುತ್ವದ ಮೌಲ್ಯ ಹಾಗೂ ನಾಯಕತ್ವದ ಗುಣಗಳ ಅರಿವು ಮೂಡಿಸಲು ವಿದ್ಯಾರ್ಥಿ ಸಂಘ ರಚನೆಯಾಗಬೇಕೆಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕ ಪ್ರಕಾಶ್ ಪೌಲ್ ಡಿ’ಸೋಜ, ಇವರು ವಿದ್ಯಾರ್ಥಿ ಸಂಘದ ಫಲಕವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.ವಿದ್ಯಾರ್ಥಿಗಳು ಸಂಸ್ಥೆಯ ನಿಯಮಾವಳಿಗಳನ್ನು ಹಾಗೂ ನಾಯಕತ್ವವನ್ನು ಜವಾಬ್ದಾರಿತವಾಗಿ ನಡೆಸಬೇಕು ಪ್ರಜಾಪ್ರಭುತ್ವದ ನಡೆಯಂತೆ ಸಮಾಜದಲ್ಲಿ ನಾಯಕತ್ವದ ಗುಣಗಳು ಮಾದರಿಯಾಗಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ಅಮಿತ್ ಪ್ರಕಾಶ್ ರೋಡ್ರಿಗಸ್, ಸೈಂಟ್ ಜೋಕಿಮ್ಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಶ್ರೀಲತಾ , ವಿದ್ಯಾರ್ಥಿ ಸಂಘದ ನಿರ್ದೇಶಕಿ ಏಲಿಕುಟ್ಟಿ ಉಪಸ್ಥಿತರಿದ್ದರು . ವಿದ್ಯಾರ್ಥಿ ನಾಯಕಿಯಾಗಿ 10ನೇ ತರಗತಿಯ ಫಾತಿಮತ್ ಝುಲ್ಪಾ ಉಪನಾಯಕಿಯಾಗಿ 9ನೇ ತರಗತಿಯ ಆಯಿಷತ್ ಆಶಿಫ, ವಿರೋಧಪಕ್ಷದ ನಾಯಕನಾಗಿ ಅಮೃತ್, ಸಾಂಸ್ಕೃತಿಕ ಸಂಘದ ಮಂತ್ರಿ ರಶ್ಮಿತಾ ಕೆ, ಕ್ರೀಡಾ ಮಂತ್ರಿ ಮೋಕ್ಷಾ ,ಶಿಕ್ಷಣ ಮಂತ್ರಿ ಖತೀಜಾ ಸ್ವೀಬಾ. ವಾರ್ತಾ ಮಂತ್ರಿ ಫಾತಿಮಾತ್ ಅಫ್ರಾ ,ಶಿಸ್ತಿನ ಮಂತ್ರಿ ಪುಣ್ಯಶ್ರೀ, ಕಲಾ ಸಂಘ ಸಾಯಿಸ್ತಾ, ವಿಜ್ಞಾನ ಸಂಘ ಶ್ರಾವ್ಯ, ನೀರಾವರಿ ಮಂತ್ರಿ ಸಫೀದಾ, ಸ್ವಚ್ಛತಾ ಮಂತ್ರಿ ಮಹಮ್ಮದ್ ಅನಾಸ್, ಭದ್ರತಾ ಮಂತ್ರಿ ಶಮಂತ್, ಆರೋಗ್ಯ ಮಂತ್ರಿ ಅರ್ಷಾದ್ ಶಾಲಾ ಮಂತ್ರಿ ಮಂಡಲಕ್ಕೆ ಆಯ್ಕೆಗೊಂಡು ಪ್ರಜಾಪ್ರಭುತ್ವದ ಸಂವಿಧಾನದ ಪ್ರಕಾರ ಪ್ರಮಾಣ ವಚನ ಮಾಡಿದರು. ವಿದ್ಯಾರ್ಥಿ ಸಂಘದ ನಿರ್ದೇಶಕಿ ಏಲಿಕುಟ್ಟಿ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಪಿ ವಂದಿಸಿ , ಸಹ ಶಿಕ್ಷಕಿ ವಿನುತಾ ಕಾರ್ಯಕ್ರಮ ನಿರ್ವಹಿಸಿದರು.