ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷಾವಧಿಯ ಕೊನೆಯ ಕುಟುಂಬ ಸಮ್ಮಿಲನ, ಸಾಂಸ್ಕೃತಿಕ ರಸಸಂಜೆ

0

ಪುತ್ತೂರು: ಕ್ಲಬ್ ಮುಖೇನ ವರ್ಷಪೂರ್ತಿ ವಿವಿಧ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಸಹೃದಯಿ ನಾಗರಿಕರ ಹೃನ್ಮನ ತುಂಬಿರುವ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರ ಅಧ್ಯಕ್ಷಾವಧಿಯ ಕೊನೆಯ ಕುಟುಂಬ ಸಮ್ಮಿಲನ ಹಾಗೂ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮ ಜೂ.30 ರಂದು ಬೊಳ್ವಾರಿನ ಮಹಾವೀರ ವೆಂಚರ‍್ಸ್‌ನಲ್ಲಿ ಜರಗಿತು.


ಕಾರ್ಯಕ್ರಮದಲ್ಲಿ ಯಾವುದೇ ಸಭಾ ಕಾರ್ಯಕ್ರಮಕ್ಕೆ ಆಸ್ಪದ ನೀಡದೆ ಕ್ಲಬ್ ಸದಸ್ಯರ, ಸದಸ್ಯರ ಕುಟುಂಬಿಕರ ಮನರಂಜನೆಗೆ ಮಾತ್ರ ಅವಕಾಶವನ್ನು ನೀಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ನಡುವೆ ವರ್ಷಪೂರ್ತಿ ಕ್ಲಬ್‌ಗೆ ಸಹಕರಿಸಿದವರಿಗೆ ಹೂಗುಚ್ಛ ನೀಡಿ ಅಭಿನಂದಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಆನೆಟ್‌ಗಳಾದ ಆರಾಧನಾ ಹಾಗೂ ಪ್ರಾರ್ಥನಾರವರ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಕ್ಲಬ್‌ನ ಮನೋಜ್ ಟಿ.ವಿರವರಿಂದ ಮಲಯಾಳಂ ಭಕ್ತಿಗೀತೆ, ಅಜೇಯ್ ಪಡಿವಾಳ್‌ರವರಿಂದ ಹಿಂದಿ ಗೀತೆ, ಡಾ.ಎಂ.ಎಸ್ ಭಟ್ ಹಾಗೂ ಶಂಕರಿ ಎಸ್ ಭಟ್ ದಂಪತಿರವರಿಂದ ಅನ್ನಪೂರ್ಣೇಶ್ವರಿ ಶ್ಲೋಕ, ಆನೆಟ್ ಸಾಧ್ವಿ ಸುಜಿತ್ ರೈಯವರಿಂದ ಡ್ಯಾನ್ಸ್, ಕಿಶನ್ ಬಿ.ವಿರವರಿಂದ ಭಾವಗೀತೆ, ರಾಜ್‌ಗೋಪಾಲ್ ಬಲ್ಲಾಳ್ ಹಾಗೂ ಅವರ ಪುತ್ರಿರವರಿಂದ ಕನ್ನಡ ಚಿತ್ರಗೀತೆ, ಆನೆಟ್ ಜಯಕೀರ್ಥರವರಿಂದ ಕನ್ನಡ ಚಿತ್ರಗೀತೆ, ವಿ.ಜೆ ಫೆರ್ನಾಂಡೀಸ್‌ರವರಿಂದ ತುಳು ಚಿತ್ರಗೀತೆ, ಹೇಮಾ ಜಯರಾಂರವರ ಪುತ್ರಿ ಜ್ಞಾನ ರೈಯವರಿಂದ ನೃತ್ಯ, ಸುಬ್ಬಪ್ಪ ಕೈಕಂಬ, ಉಮಾನಾಥ್ ಪಿ.ಬಿ, ಸೋಮಪ್ಪ ಗೌಡ, ಜಗದೀಶ್ ಆಚಾರ್ಯ, ಪ್ರೇಮಾನಂದರವರಿಂದ ಪ್ರಹಸನ, ಡಾ.ಜೆ.ಸಿ ಅಡಿಗರವರ ಪುತ್ರಿ ಮೇಧಾರವರಿಂದ ಭಕ್ತಿಗೀತೆ, ದತ್ತಾತ್ರೇಯ ರಾವ್, ಡಾ.ಅಶೋಕ್ ಪಡಿವಾಳ್, ದಾಮೋದರ್ ಕೆ.ರವರಿಂದ ಗೀತೆ ಹೀಗೆ ಅನೇಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸರ್ವರ ಶ್ಲಾಘನೆಗೆ ಪಾತ್ರರಾದರು.


ವಲಯ ಐದರ ಅಸಿಸ್ಟೆಂಟ್ ಗವರ್ನರ್ ಸೂರ್ಯನಾಥ ಆಳ್ವ, ಕ್ಲಬ್ ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್, ನಿಯೋಜಿತ ಕಾರ್ಯದರ್ಶಿ ದಾಮೋದರ್ ಕೆ, ನಿಕಟಪೂರ್ವ ಕಾರ್ಯದರ್ಶಿ ಸುಜಿತ್ ಡಿ.ರೈ ಸಹಿತ ರೋಟರಿ ಕ್ಲಬ್ ಪುತ್ತೂರು ಸದಸ್ಯರು, ಕುಟುಂಬಿಕರು, ಹಿತೈಷಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಸಂಭ್ರಮದ ಭೋಜನವೇರ್ಪಟ್ಟಿತು. ಸುಬ್ಬಪ್ಪ ಕೈಕಂಬ ಹಾಗೂ ಡಾ.ಶ್ರೀಪ್ರಕಾಶ್‌ರವರು ಕಾರ್ಯಕ್ರಮ ನಿರೂಪಿಸಿದರು.

ಎಲ್ಲರ ಸಹಕಾರದಿಂದ ಯಶಸ್ವಿ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂತೋಷದಿಂದ ನಿರ್ಗಮಿಸುತ್ತಿದ್ದೇನೆ…
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷನಾಗಿ ಆಯ್ಕೆಯಾಗಿ ಇದೀಗ ಸಂತೋಷದಿಂದ ನಿರ್ಗಮಿಸುತ್ತಿದ್ದೇನೆ. ಈ ಒಂದು ವರ್ಷದ ಅವಧಿಯಲ್ಲಿ ಕ್ಲಬ್ ಸದಸ್ಯರ, ಹಿತೈಷಿಗಳ ತುಂಬು ಸಹಕಾರದಿಂದ ಯಶಸ್ವಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಿದೆ ಮಾತ್ರವಲ್ಲ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಬಹಳ ಹತ್ತಿರವಾಗಿದೆ. ನಮ್ಮ ಕ್ಲಬ್ ಕಾರ್ಯಕ್ರಮಗಳನ್ನು ಗಮನಿಸಿ ಅನೇಕ ಹೊಸ ಮುಖಗಳು ಕ್ಲಬ್ ಸೇರಿಕೊಳ್ಳಲು ಉತ್ಸುಕರಾಗಿದ್ದಾರೆ. ಕ್ಲಬ್‌ನಿಂದ ರಕ್ತನಿಧಿ, ಡಯಾಲಿಸಿಸ್, ಕಣ್ಣಿನ ಆಸ್ಪತ್ರೆಯಂತಹ ಶಾಶ್ವತ ಯೋಜನೆಗಳು ಲೋಕಾರ್ಪಣೆಗೊಂಡಿದ್ದು ಮುಂದಿನ ವರ್ಷ ಮೆಮೋಗ್ರಾಫಿ ಸೆಂಟರ್ ಲೋಕಾರ್ಪಣೆಗೊಳ್ಳಲಿದ್ದು, ನನ್ನ ಸೇವೆ ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ.
-ಜೈರಾಜ್ ಭಂಡಾರಿ, ನಿರ್ಗಮಿತ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು

LEAVE A REPLY

Please enter your comment!
Please enter your name here