ನಾಳೆ(ಜು.2): ಕುಂಬ್ರ, ಸವಣೂರು, ಕಡಬದ, ನೆಲ್ಯಾಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

0

ಪುತ್ತೂರು: ನಿರ್ವಹಣಾ ಕಾಮಗಾರಿ, ಅಪಾಯಕಾರಿ ಮರಗಳ ತೆರವು ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕುಂಬ್ರ ಉಪ ವಿಭಾಗ, ಪುತ್ತೂರು ಉಪ ವಿಭಾಗ ಹಾಗೂ ಕಡಬ ಸವಣೂರು ಮಾರ್ಗಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯ ತನಕ ವಿದ್ಯುತ್ ನಿಲುಗಡೆಯಾಗಲಿದೆ.
ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಕುಂಬ್ರ ಉಪ ವಿಭಾಗದ 33/11 ಕೆ.ವಿ ವಿದ್ಯುತ್ ಉಪಕೇಂದ್ರದಿಂ ಹೊರಡುವ ಮದ್ಲ, ದೇರ್ಲ, ಸುಳ್ಯಪದವು, ಇರ್ದೆ ಮತ್ತು ಪಾಣಾಜೆ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಪುತ್ತೂರು-ಸವಣೂರು-ನೆಲ್ಯಾಡಿ ಮಾರ್ಗಗಳ ಮಧ್ಯೆಯಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ 33ಕೆವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ ಹಾಗೂ 33ಕೆವಿ ಪುತ್ತೂರು-ಸವಣೂರು-ನೆಲ್ಯಡಿ ವಿದ್ಯುತ್ ಮಾರ್ಗಗಳಲ್ಲಿ ನಿಲುಗಡೆಯಾಗಲಿದೆ.
ನಿರ್ವಹಣಾ ಕಾಮಗಾರಿಗಾಗಿ 33/11 ಕೆವಿ ಸವಣೂರು ಉಪಕೇಂದ್ರದಿಂದ ಹೊರಡುವ 11ಕೆವಿ ಕಾಣಿಯೂರು, ದೋಳ್ಪಾಡಿ, ವೀರಮಂಗಲ, ಏಣಿತ್ತಡ್ಕ, ಭಕ್ತಕೋಡಿ, ಪುಣ್ಚಪ್ಪಾಡಿ, ಚಾರ್ವಾಕ ಮತ್ತು ಶಾಂತಿಗೋಡು ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪುತ್ತೂರು ಉಪವಿಭಾಗ ಹಾಗೂ ಕುಂಬ್ರ ಉಪವಿಭಾಗದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here