ಡಾಕ್ಟರ್ಸ್ ಡೇ:ರೋಟರಿ ಸ್ವರ್ಣದಿಂದ ಡಾ.ಸುಧೀರ್ ಟಿ.ರವರಿಗೆ ಸನ್ಮಾನ

0

ಪುತ್ತೂರು: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ವೈದ್ಯರಾದ ಡಾ.ಸುಧೀರ್ ಟಿ ಮೊಟ್ಟೆತ್ತಡ್ಕ ಇವರನ್ನು ಡಾಕ್ಟರ್ಸ್ ಡೇ ಪ್ರಯುಕ್ತ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ಜು.1 ರಂದು ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿದ ಡಾ. ಸುಧೀರ್ ಟಿ ಇವರು ಮಾತನಾಡಿ, ನಾನು 1993 ರಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿದ್ದು ಜನರು ನನ್ನ ಮೇಲೆ ಅಭಿಮಾನವನ್ನು ತೋರಿರುತ್ತಾರೆ. ಈ ನನ್ನ ಸೇವೆಯನ್ನು ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಸ್ವರ್ಣ ಇವರು ಗುರುತಿಸಿರುವುದು ನನಗೆ ಬಹಳ ಸಂತೋಷವನ್ನು ಉಂಟು ಮಾಡಿದೆ. ಈ ಸನ್ಮಾನವು ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ಎಲ್ಲರಿಗೂ ಮಾಡಿದ ಸನ್ಮಾನವೆಂದು ಭಾವಿಸುತ್ತೇನೆಂದು ಹಾಗೂ ರೋಟರಿ ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಸೇವೆಗಳು ಜನರಿಗೆ ಲಭಿಸಲಿ ಎಂದು ಹೇಳಿದರು.


ರೋಟರಿ ಸ್ವರ್ಣದ ಅಧ್ಯಕ್ಷ ಸುರೇಶ್ ಪಿ , ಪುಡಾ ಅಧ್ಯಕ್ಷ ಹಾಗೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ಸದಸ್ಯರಾದ ಭಾಸ್ಕರ ಕೋಡಿಂಬಾಳ, ವಲಯ ಸೇನಾನಿ ವೆಂಕಟರಮಣ ಗೌಡ ಕಳುವಾಜೆ , ನಿಕಟಪೂರ್ವ ಅಧ್ಯಕ್ಷ ಸುಂದರ ರೈ ಬಲ್ಕಾಡಿ, ಕಾರ್ಯದರ್ಶಿ ಸೆನೋರಿಟ ಆನಂದ್ ಸನ್ಮಾನಿತರಿಗೆ ಶುಭ ಹಾರೈಸಿದರು. ಕ್ಲಬ್ ಸಾರ್ಜಂಟ್ ಎಟ್ ಆಮ್ಸ್೯ ಸುಭಾಷ್ ರೈ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here