ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – 2024-25ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆ

0

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ’ಸಮನ್ವಯ’ ಸಮಾಜ ವಿಜ್ಞಾನ ಸಂಘದ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಚುನಾವಣೆ ಹಾಗೂ ಮಂತ್ರಿಮಂಡಲ ರಚನಾ ಪ್ರಕ್ರಿಯೆ ನಡೆಯಿತು. ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯ ಸಾಮಾನ್ಯ ಪ್ರಜ್ಞೆಯನ್ನು ಮೂಡಿಸುವ ನೆಲೆಯಲ್ಲಿ ಇ.ವಿ.ಎಂ ಮತಯಂತ್ರದ ಮೂಲಕ 2024-25ನೇ ಸಾಲಿನ ಚುನಾವಣೆಯನ್ನು ನಡೆಸಲಾಯಿತು. ಪ್ರೌಢಶಾಲಾ ವಿಭಾಗದ ನಾಯಕನಾಗಿ ಚಿರಂತನ್ ಕೆ.ವಿ ಮತ್ತು ಉಪನಾಯಕನಾಗಿ ಧನ್ವಿತ್ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಅದ್ವಿತ್ ಜಿ ಮತ್ತು ಉಪನಾಯಕನಾಗಿ ಸುಭಾಷ್ ಹೆಚ್.ಎನ್ ಆಯ್ಕೆಯಾದರು.

ಶಾಲಾ ಪ್ರತಿಪಕ್ಷ ನಾಯಕಿಯಾಗಿ – ಪ್ರಜ್ಞಾ ನಿಡ್ವಣ್ಣಾಯ, ಗೃಹ ಮಂತ್ರಿ – ಸ್ಕಂದ ಬಳ್ಳಕ್ಕುರಾಯ, ಸ್ಪೀಕರ್ – ಶೃಜನ್ ಜೆ ರೈ, ಕಾನೂನು ಮಂತ್ರಿ – ಲೋಚನ ಎಂ, ಸಾಂಸ್ಕೃತಿಕ ಮಂತ್ರಿ – ಗಗನ ವಿ, ವಿದ್ಯಾಮಂತ್ರಿ – ಪೂಜಾ, ನೀರಾವರಿ ಮಂತ್ರಿ – ಮನೀಷ್ ಎಚ್.ಎಸ್, ಕ್ರೀಡಾಮಂತ್ರಿ – ಪವನ್ ಕುಮಾರ್, ಆರೋಗ್ಯ ಮಂತ್ರಿ -ದೀಕ್ಷಿತಾ, ನೈರ್ಮಲ್ಯ ಮಂತ್ರಿ – ತವನಿಧಿ ಶೆಟ್ಟಿ, ಸಾರಿಗೆ ಮಂತ್ರಿ – ಅಭಿಷೇಕ್ ಜಿ, ವಾರ್ತಾಮಂತ್ರಿ – ನಿಸರ್ಗ ಮಾರ್ಕೋಪೋಲೋ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ – ಶ್ರೀವತ್ಸ, ಕಾರ್ಯದರ್ಶಿ – ದಕ್ಷ ರೈ, ಆಹಾರ ಮಂತ್ರಿ – ಜಸ್ವಂತ್ ಎಸ್.ಎಲ್, ವಿದ್ಯಾರ್ಥಿ ಕ್ಷೇಮ ಮಂತ್ರಿಯಾಗಿ ಬಿಂದುಶ್ರೀಯವರನ್ನು ಆಯ್ಕೆ ಮಾಡಲಾಯಿತು.
ಪ್ರಮಾಣ ವಚನಾ ಸಮಾರಂಭದಲ್ಲಿ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿ ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಆ ಮೂಲಕ ಶಾಲಾ ಶಿಸ್ತನ್ನು ಪಾಲಿಸುವಂತೆ ತಿಳಿಸಿ, ನೂತನ ಸಂಸತ್ತಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ, ಸಮಾಜ ವಿಜ್ಞಾನ ಸಮನ್ವಯ ಸಂಘದ ಶಿಕ್ಷಕರಾದ ಲೀಲಾವತಿ, ರಾಮನಾಯ್ಕ, ಗೀತಾರವರು ಸಂಯೋಜಕತ್ವದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here