ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಜು.2ರಂದು ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯ ಗುರು ಧರ್ಮ ಗುರುಗಳು ಮ್ಯಾಕ್ಸಿಮ್ ಡಿಸೋಜರವರು ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮಂಗಳೂರು ಉಪ ಮುಖ್ಯ ವಿದ್ಯುತ್ ಪರಿವೀಕ್ಷಕ ಕೆ. ಎಂ. ಕಾಂತರಾಜು ಮತ್ತು ತಂಡದ ಸದಸ್ಯರು ವಿದ್ಯುತ್ ಬಳಕೆಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸುವುದರ ಜೊತೆಗೆ, ವಿದ್ಯುತ್ ಅಪಘಾತದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ಪಿ.ಪಿ.ಟಿಯನ್ನು ಪ್ರಸ್ತುತ ಪಡಿಸಿ, ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇಲಾಖೆಯ ವತಿಯಿಂದ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಯಿತು.ಶಿಕ್ಷಕಿ ದೀಪ್ತಿ ಸ್ವಾಗತಿಸಿ, ಶಾಲಾ ಸಹ ಶಿಕ್ಷಕಿ ಪ್ರಿಯಾ ಕುಮಾರಿ ವಂದಿಸಿದರು. ಸಹ ಶಿಕ್ಷಕಿ ಲವಿನ ಡಿಸೋಜ ಕಾರ್ಯಕ್ರಮ ನಿರೂಪಿಸಿದರು .
ವಿದ್ಯುತ್ ಪರಿವೀಕ್ಷಕರು ಮನೋಜ್ ಎಂ, ಉಪ ವಿದ್ಯುತ್ ಪರಿವೀಕ್ಷಕರು ಸುರೇಂದ್ರ, ಸಹಾಯಕ ವಿದ್ಯುತ್ ಪರಿವೀಕ್ಷಕ ವಿರೂಪಣ್ಣ ಕುಂಬಾರ ಮತ್ತು ಸುನಿಲ್ ಕುಮಾರ್,ಆಧಿಕ್ಷಕರು ಪೃಥ್ವಿರಾಜ್ ಎಸ್,ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲೋರ ಪಾಯಸ್ ರವರು ಹಾಗೂ ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷ ವಿವೇಕ್ ಆಳ್ವರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.