ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಗಣೇಶ ರೈ .ಕೆ ಮನವಳಿಕೆಯವರ ಬೀಳ್ಕೊಡುಗೆ ಕಾರ್ಯಕ್ರಮ

0

ಆಲಂಕಾರು :ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವಾ ನಿವೃತ್ತರಾದ ಗಣೇಶ್ .ಕೆ ಮನವಳಿಕೆ ಯವರ ಬೀಳ್ಕೋಡುಗೆ ಕಾರ್ಯಕ್ರಮ ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.


ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರಿನ ಅಧ್ಯಕ್ಷರಾದ ಸುಚರಿತ ಶೆಟ್ಟಿಯವರು ಸೇವಾ ನಿವೃತ್ತರಾದ ಗಣೇಶ ರೈ .ಕೆ ಮನವಳಿಕೆಯವರನ್ನು ಸನ್ಮಾನಿಸಿ ಮಾತನಾಡಿ ಗಣೇಶ್ ರೈ .ಕೆ ಮನವಳಿಕೆ ಯವರು ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆ ಅಲಂಕರಿಸಿ, ಎಲ್ಲಾ ಅಧ್ಯಕ್ಷರು,ಪದಾಧಿಕಾರಿಗಳನ್ನು ಹಾಗು ಸಂಘದ ಸದಸ್ಯರನ್ನು ಜೊತೆ ಸೇರಿಸಿಕೊಂಡು ಸಂಘವನ್ನು ಬೆಳೆಸಿದವರು.ಸಂಘದ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ಮಾತ್ರ ಸಂಘ ಅಭಿವೃದ್ಧಿ ಗೊಳ್ಳಲು ಸಾಧ್ಯ. ದ.ಕ ಜಿಲ್ಲಾ ಹಾಲು ಒಕ್ಕೂಟ ಇಂತಹ ಅಧ್ಯಕ್ಷರು,ಪದಾಧಿಕಾರಿಗಳು, ರೈತರು ಹಾಗು ಸಿಬಂದ್ದಿಗಳ ಸಹಕಾರದೊಂದಿಗೆ ಒಕ್ಕೂಟ ಬೆಳೆದು ಇಂದು ದೇಶಕ್ಕೆ ರಾಜ್ಯಕ್ಕೆ ಮಾದರಿಯಾಗಿದೆ.ಈ ವರ್ಷ ಒಕ್ಕೋಟವು ಅಂದಾಜು 8 ಕೋಟಿಯಷ್ಟು ಲಾಭ ಪಡೆಯಲಿದ್ದು ಸಹಕರಿಸಿದವರಿಗೆಲ್ಲಾ ಅಭಿನಂದನೆ ಸಲ್ಲಿಸಿದರು. ಅವಿಭಾಜಿತ ದ.ಕ ಜಿಲ್ಲೆಯಲ್ಲಿ ಸಂಸ್ಕೃತಿ, ಕೃಷಿ, ಸಾಮರಸ್ಯ,ಸೌಹಾರ್ದ ದತೆ ಉಳಿಯಬೇಕಾದರೆ ಪ್ರತಿಯೊಬ್ಬರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು.ಹೈನುಗಾರಿಕೆ ಯಿಂದ ಮಾತ್ರ ನಮ್ಮ ಕೃಷಿ, ಸಂಸ್ಕೃತ, ಧಾರ್ಮಿಕತೆ,ಸಾಮರಸ್ಯ ಉಳಿಯಲು ಸಾಧ್ಯ,ಮಹಿಳೆಯರು ಹಾಗು ಯುವಶಕ್ತಿಗಳು ಹೈನುಗಾರಿಕೆ ಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ತಿಳಿಸಿ ರೈತರು
ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ ದ.ಕ ಜಿಲ್ಲಾ ಹಾಲು ಒಕ್ಕೂಟವನ್ನು ಬೆಳೆಸುವುದರಲ್ಲಿ ಎಲ್ಲಾರು ಸಹಕಾರಿಯಾಗಬೇಕು,ಜನಪ್ರತಿನಿಧಿ ಹಾಗು ಪುತ್ತೂರಿನ ಶಾಸಕರ ಸಹಕಾರದೊಂದಿಗೆ ಇದೀಗಲೇ ಪುತ್ತೂರಿನಲ್ಲಿ 10 ಎಕ್ರೆ ಜಾಗವನ್ನು ಒಕ್ಕೋಟಕ್ಕೆ ಖಾದಿರಿಸಲಾಗಿದೆ.ಮುಂದಕ್ಕೆ ಇದೇ ಜಾಗದಲ್ಲಿ ಸುಸಜ್ಜಿತ ವಾದ ಡೈರಿಯ ಸಂಕೀರ್ಣ ನಿರ್ಮಾಣ ಮಾಡುವುದಾಗಿ ತಿಳಿಸಿ ಇದಕ್ಕೆ ಎಲ್ಲಾರು ಸಹಕಾರ ನೀಡುವಂತೆ ತಿಳಿಸಿ ನಿವೃತ್ತ ಗಣೇಶ್ ರೈ .ಕೆ.ಮನವಳಿಕೆಯವರ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.


ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರಿನ ಉಪಾಧ್ಯಕ್ಷರಾದ ಎಸ್.ಬಿ ಜಯರಾಮ ರೈಯವರು ಮಾತನಾಡಿ ಗಣೇಶ್ ರೈ ಯವರು ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸ್ಥಾಪಕ ಕಾರ್ಯನಿರ್ವಹಣಾಕಾರಿಯಾಗಿ 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸಂಘದ ಘನತೆ ಮತ್ತು ಕೀರ್ತಿಯನ್ನು ಎತ್ತಿ ಹಿಡಿದವರು, ಒಬ್ಬ ಮೌನಿಯಾಗಿ ಶಾಂತ ಸ್ವಭಾವದವರಾಗಿ ಎಲ್ಲಾರ ಪ್ರೀತಿ,ವಿಶ್ವಾಸಕ್ಕೆ ಪಾತ್ರರಾದವರು.ಸೇವೆಯಲ್ಲಿ ಮುಂಬಡ್ತಿ,ಹಿಂಬಡ್ತಿ,ನಿವೃತ್ತಿ ಸಹಜ,ಗಣೇಶ್ ರೈ .ಕೆ ಮನವಳಿಕೆ ಯವರು ವೃತ್ತಿಯಲ್ಲಿ ನಿವೃತ್ತಿಯಾದರೂ ಹೈನುಗಾರಿಕೆಯಲ್ಲಿ ನಿವೃತ್ತಿಯಾಗಬಾರದು ಎಂದು ತಿಳಿಸಿ ಗಣೇಶ್ ರೈ .ಕೆ ಮನವಳಿಕೆ ಯವರ ನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.


ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರಿನ ನಿರ್ದೇಶಕರಾದ ನಾರಾಯಣ ಪ್ರಕಾಶ್ ಮಾತನಾಡಿ ಸಹಕಾರಿಗಳು ಯಾವತ್ತೂ ಸಹಾಕಾರಿಗಳಾಗಬೇಕು ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘ 36 ಲೀಟರ್ ಹಾಲಿನಿಂದ ಪ್ರಾರಂಭವಾಗಿ ಇಂದು 2000 ಲೀಟರ್ ನಷ್ಟು ಹಾಲು ಸಂಗ್ರಹಣೆ ಮಾಡಲು ಇಂದು ಶಕ್ತವಾಗಿದೆ.ಇದಕ್ಕೆ ಕಾರ್ಯನಿರ್ವಹಣಾಧಿಕಾರಿ ಗಣೇಶ್ ರೈ.ಕೆ .ಮನವಳಿಕೆ , ಅಡಳಿತಮಂಡಳಿ , ಸಿಬ್ಬಂದಿ,ಸದಸ್ಯರ ಶ್ರಮದಿಂದ ಮಾತ್ರ ಸಾಧ್ಯವಾಗಿದೆ ಎಂದು ತಿಳಿಸಿ ಗಣೇಶ್ ರೈ .ಮನವಳಿಕೆ ಯವರ ನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.ಇದೇ ಸಂಧರ್ಭದಲ್ಲಿ ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಗಣೇಶ್ ರೈ ಕೆಯವರಿಗೆ ಹಾರ,ಫಲಪುಷ್ಪ,ಶಾಲು,ಬೆಳ್ಳಿಯ ತಟ್ಟೆ ನೀಡಿ ಸನ್ಮಾನಿಸಲಾಯಿತು.ನಂತರ ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ,ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಪ್ರಮುಖರಾದ ಸೇಸಪ್ಪ ರೈ .ಕೆ ರಾಮಕುಂಜ,ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ,ಆಲಂಕಾರು ಗ್ರಾ.ಪಂ ನ ನಿವೃತ್ತ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ ಸೇರಿದಂತೆ ಹಲವರು ನಿವೃತ್ತ ಗಣೇಶ್ ರೈ ಕೆ ಯವರಿಗೆ ಶಾಲು ,ಹಾರ ಹಾಕಿ ಗೌರವಿಸಿದವರು.ನಂತರ ಗಣೇಶ್ ರೈ.ಕೆ ಮನವಳಿಕೆ ಯವರು ಮಾತನಾಡಿ ತಮ್ಮ ಸೇವಾವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಸಂಘದ ಅಧ್ಯಕ್ಷರು,ಪದಾಧಿಕಾರಿಗಳಿಗೆ,ಸಿಬ್ಬಂದಿಗಳಿಗೆ ,ವಿವಿಧ ಇಲಾಖಾಧಿಕಾರಿಗಳಿಗೆ,ರೈತರಿಗೆ,ಪತ್ರಿಕಾ ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸಿದರು.


ವೇದಿಕೆಯಲ್ಲಿ ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ವ್ಯವಸ್ಥಾಪಕರಾದ ಡಾ.ರವಿರಾಜ ಉಡುಪ,ಉಪವ್ಯವಸ್ಥಾಪಕರಾದ ಡಾ.ಡಿ.ಆರ್ ಸತೀಶ್ ರಾವ್,ನಿವೃತ್ತ ಉಪವ್ಯವಸ್ಥಾಪಕರಾದ ರಾಮಕೃಷ್ಣ ಭಟ್ಟ್,ವಿಸ್ತರಣಾಧಿಕಾರಿ ಆದಿತ್ಯ ಸಿ,ಸಂಘದ ಉಪಾಧ್ಯಕ್ಷ ಮುರಳೀಧರ ರೈ ಮನವಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷರಾದ ಮಾಧವ ಪೂಜಾರಿ ಕಯ್ಯಪ್ಪೆ ಸ್ವಾಗತಿಸಿ, ಸಂಘದ ಮಾಜಿ ಅಧ್ಯಕ್ಷ ಹಾಗು ಹಾಲಿ ನಿರ್ದೇಶಕ ರಾಧಾಕೃಷ್ಣ ರೈ ಮನವಳಿಕೆ ಪ್ರಾಸ್ತಾವಿಕ ವಾಗಿ ಮಾತನಾಡಿ ಪ್ರಣದ್ ರೈ ಪ್ರಾರ್ಥಿಸಿ ,ಲೋಕನಾಥ ರೈ ಕೇಲ್ಕ ರಾಮಕುಂಜ ಕಾರ್ಯಕ್ರಮ‌ ನಿರೂಪಿಸಿ ಸಂಘದ ಮಾಜಿ ಅಧ್ಯಕ್ಷ,ಹಾಲಿ ನಿರ್ದೇಶಕ ರಾಮಣ್ಣ ಗೌಡ ಸುರುಳಿ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ನಿರ್ದೆಶಕರುಗಳಾದ ಜನಾರ್ಧನ ಭಂಡಾರಿ ಕುಪ್ಲಾಜೆ, ಹರೀಶ ಏಂತಡ್ಕ , ಲಿಂಗಪ್ಪ ಮಡಿವಾಳ ಮಡ್ಯೊಟ್ಟು , ಬಾಸ್ಕರ ಎನ್ ಪಟ್ಟೆ ಮನೋಜ್ ಆಲಡ್ಕ , ಕರಿಯ ಮುಗೇರ ಕೇಪುಳು ,ಗೋಪಾಲ ಶಾಂತಿಗುರಿ , ಪ್ರೇಮಲತಾ ಆಲಡ್ಕ,ರಾಜೇಶ್ವರಿ ಬಳಂಪೋಡಿ ,ಸಿಬ್ಬಂದಿಗಳಾದ ಶೀನಪ್ಪ ಗೌಡ ಮುಂಡ್ರೇಲು ,ಅನಿತಾ ಟಿ ವಳಕಡಮ , ಬಾಲಚಂದ್ರ ಕೋಲ್ಪೆತ್ತಿ ಮಾರ್ ,
ವಿಖ್ಯಾತ್ ರೈ ಎಮ್ ಮನವಳಿಕೆಯವರು ಹಾಗು ಸಂಘದ ಸದಸ್ಯರು ಕಾರ್ಯಕ್ರಮ ದಲ್ಲಿ ಸಹಕರಿಸಿದರು

LEAVE A REPLY

Please enter your comment!
Please enter your name here