ಪುತ್ತೂರು: ಸುಳ್ಯ ತಾಲೂಕಿಗೆ ಒಳಪಡುವ ಕೊಯಿಲ ಗ್ರಾಮದ ಬಡ್ಡಮೆ ಎಂಬಲ್ಲಿ ರಭಸವಾಗಿ ಹರಿಯುವ ಅಪಾಯಕಾರಿ ತೋಡಿನ ಬದಿಯಲ್ಲಿರುವ ಕಾಲು ದಾರಿಯಲ್ಲಿ ಶಾಲೆಗೆ ಹೋಗುವ ಮಕ್ಕಳ ಸಂಚಾರ ನಿಜಕ್ಕೂ ಬಹಳ ಅಪಾಯಕಾರಿಯಾಗಿದೆ.
ಮಳೆಗಾಲದಲ್ಲಂತೂ ಇಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತು ಕೊಂಡು ತೋಡಿನ ಬದಿಗೆ ತಡೆಗೋಡೆ ಮತ್ತು ಕಬ್ಬಿಣದ ತಡೆ ಬೇಲಿ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರು, ಪಂಚಾಯತ್, ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು. ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮಕೈಗೊಳ್ಳಲು ನಾಗರಿಕ ಹಿತರಕ್ಷಣಾ ವೇದಿಕೆ ಕೆಮ್ಮಾರ ಇದರ ಅಧ್ಯಕ್ಷ ಅಝೀಝ್ ಬಿ.ಕೆ ಆಗ್ರಹಿಸಿದ್ದಾರೆ.