ಪುತ್ತೂರು:ನಗರಸಭಾ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತೆ, ಅಪಾಯಕಾರಿ ಮರದ ಗೆಲ್ಲುಗಳ ತೆರವು, ರಸ್ತೆ ಬದಿಯ ಗಿಡಗಂಟಿಗಳ ತೆರವು ಸೇರಿದಂತೆ,ಮಳೆಗಾಲದ ಮುಂಚಿತವಾಗಿ ಮಾಡಬೇಕಾದ ಕಾಮಗಾರಿಗಳನ್ನು ನಿರ್ವಹಿಸದೇ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡಲು ಬಿಜೆಪಿ ಪುತ್ತೂರು ನಗರ ಮಂಡಲ ವತಿಯಿಂದ ನಡೆದ ನಗರಸಭಾ ಬಿಜೆಪಿ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯು ಜು.2ರಂದು ಬಿಜೆಪಿ ಕಚೇರಿಯಲ್ಲಿ ನಗರಸಭಾ ಸದಸ್ಯರೂ ಆಗಿರುವ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.15ನೇ ಹಣಕಾಸು, ನಗರೋತ್ಥಾನ ಯೋಜನೆ, ನಗರಸಭಾ ನಿಧಿಯ ಮೂಲಕ ವಾರ್ಡ್ಗಳಿಗೆ ನೀಡಲಾಗುವ ಅನುದಾನದ ಹಂಚಿಕೆಯಲ್ಲಿ ವಾರ್ಡ್ನ ಸದಸ್ಯರ ಗಮನಕ್ಕೆ ತರದೇ ಕಾಮಗಾರಿ ಮಾಡದಂತೆ ಎಚ್ಚರಿಕೆ ನೀಡಲು ತೀರ್ಮಾನಿಸಲಾಯಿತು.
ನಿಕಟಪೂರ್ವ ಶಾಸಕ ಸಂಜೀವ ಮಠಂದೂರು,ನಿಕಟಪೂರ್ವ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿಯೂ ಆಗಿರುವ ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ನಗರಸಭಾ ಸದಸ್ಯರುಗಳಾದ ಗೌರಿ ಬನ್ನೂರು, ಮೋಹಿನಿ ವಿಶ್ವನಾಥ, ಲೀಲಾವತಿ, ಸುಂದರ ಪೂಜಾರಿ, ಪ್ರೇಮ್ ಕುಮಾರ್, ರಮೇಶ್ ರೈ, ಪ್ರೇಮ ನಂದಿಲ, ಪದ್ಮನಾಭ ನಾಯ್ಕ್, ಸಂತೋಷ ಕುಮಾರ್, ನವೀನ್ ಪೆರಿಯತ್ತೋಡಿ, ಇಂದಿರಾ ಆಚಾರ್ಯ, ಮನೋಹರ್ ಕಲ್ಲಾರೆ, ಬಾಲಚಂದ್ರ ಕೆಮ್ಮಿಂಜೆ, ಮಮತಾ ರಂಜನ್, ಪೂರ್ಣಿಮಾ ಚೆನ್ನಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು