ಪುತ್ತೂರು:ಇಲ್ಲಿನ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ಜು.3 ರಂದು ಫ್ಯಾಟಿ ಲಿವರ್(ಲಿವರ್ ನ ಕೊಬ್ಬು) ಇರುವವರಿಗೆ ವಿಶೇಷ ಫೈಬ್ರೋಸ್ಕ್ಯಾನ್ ಹಾಗೂ ಲಿವರ್ ಫಂಕ್ಷನ್ ಟೆಸ್ಟ್ ತಪಾಸಣೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ಈ ಪರೀಕ್ಷೆಯು ಉಚಿತವಾಗಿದ್ದು ಆಸ್ಪತ್ರೆ ವೈದ್ಯ ಡಾ.ಜೆ.ಸಿ ಅಡಿಗರವರು ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್ ಗೋಪಾಲ್ ಬಲ್ಲಾಳ್, ಸದಸ್ಯರಾದ ಶ್ರೀಧರ್ ಗೌಡ ಕಣಜಾಲು, ಪರಮೇಶ್ವರ ಗೌಡ, ಆಸ್ಪತ್ರೆ ಮ್ಯಾನೇಜರ್ ನೋಯೆಲ್ ಡಿ’ಸೋಜರವರು ಉಪಸ್ಥಿತರಿದ್ದರು.
40 ಫಲಾನುಭವಿಗಳು..
ಈ ಉಚಿತ ಶಿಬಿರದಲ್ಲಿ 40 ಮಂದಿ ಫಲಾನುಭವಿಗಳು ಪಾಲ್ಗೊಂಡರು. ಝೈಡಸ್ ಕಂಪೆನಿಯ ಸೈಯದ್ ಇಸ್ರಾರ್, ಡಾ.ಲಾಲಪತ್ ಕಂಪನಿಯ ಹರ್ಷ, ಚೇತನಾ ಆಸ್ಪತ್ರೆ ಸಿಬ್ಬಂದಿಗಳು ಈ ಶಿಬಿರ ಯಶಸ್ವಿಯಾಗಲು ನೆರವಾದರು.