ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಪಲಸಡ್ಕ ನಿವಾಸಿ ಮಾಯಿಲ ಪರವ (90ವ) ಎಂಬವರು ಜು.3 ರಂದು ನಿಧನರಾಗಿದ್ದು,ಆರ್ಥಿಕ ಸಮಸ್ಯೆಯ ಹಿನ್ನಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಬಿಜೆಪಿ ಕಾರ್ಯಕರ್ತರು ಸಹಕರಿಸಿದರು.
ಮಾಯಿಲ ಪರವ ಅವರಿಗೆ ಒರ್ವ ಪುತ್ರ ಮಾತ್ರ ಇದ್ದು ಅವರೊಬ್ಬರಿಂದ ಅಂತ್ಯ ಸಂಸ್ಕಾರ ನಡೆಸಲು ಕಷ್ಟ ಸಾಧ್ಯ ಹಿನ್ನಲೆಯಲ್ಲಿ ಬನ್ನೂರು ಬಿಜೆಪಿ ಶಕ್ತಿ ಕೆಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್. ಕೆಮ್ಮಾಯಿ, ಬಿಜೆಪಿ ಚಿಕ್ಕಮುಡ್ನೂರು ಬೂತ್ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಗ್ರಾಮ ಪಂ. ಸದಸ್ಯರಾದ ಜಯಾ ರಮೇಶ್, ರಾಘವೇಂದ್ರ ಅಂದ್ರಟ್ಟ, ಗ್ರಾ.ಪಂ. ಅಧ್ಯಕ್ಷೆ ಸ್ಮಿತಾ ಕೃಷ್ಣ, ಶಿವಪ್ರಸಾದ್ ನುಳಿಯಾಲು, ಗೀತಾ ಬಾಬು ಗೌಡ ಅವರು ಅಂತ್ಯ ಸಂಸ್ಕಾರದಲ್ಲಿ ಸಹಕರಿಸಿದರು. ವಿಶ್ವಹಿಂದೂ ಪರಿಷತ್ ನ ಆ್ಯಂಬುಲೆನ್ಸ್ ಶವ ಸಾಗಿಸಲು ಉಚಿತವಾಗಿ ನೀಡಿದ್ದಾರೆಂದು ನಾಗೇಶ್ ಟಿ ಎಸ್ ತಿಳಿಸಿದ್ದಾರೆ.