ಅಧ್ಯಕ್ಷರಾಗಿ ಪೂಜಿತ್ ಕೆ.ಎಸ್. ಕಾರ್ಯದರ್ಶಿಯಾಗಿ ಸಂಪತ್ ಕುಮಾರ್ ಸಿ.ಎಚ್.
ಪುತ್ತೂರು: ಬೆಟ್ಟಂಪಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪರಿಷತ್ ಚುನಾವಣೆಯು ಇಗಿಒ ಮತಯಂತ್ರದ ಮೂಲಕ ಪ್ರಜಾಸತ್ತಾತ್ಮಕ ರೀತಿ ಮತದಾನ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆದು ಅಧ್ಯಕ್ಷರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಪೂಜಿತ್ ಕೆ.ಎಸ್. ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಸಂಪತ್ ಕುಮಾರ್ ಸಿ.ಎಚ್. ಚುನಾಯಿತರಾದರು. ಜಂಟಿ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದಿಂದ ನಿಶ್ಮಿತಾ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿ ಮತದಾರರು ಇಗಿಒ ಮತಯಂತ್ರ ಮೂಲಕ ಮತ ಚಲಾಯಿಸಿದರು. ಚುನಾವಣಾ ಅಧಿಕಾರಿಯಾಗಿದ್ದ ಇತಿಹಾಸ ಉಪನ್ಯಾಸಕಿ ರಜನಿ ಬಿ. ಮಾತನಾಡಿ ವಿದ್ಯಾರ್ಥಿಗಳಿಗೆ ಮತದಾರರ ಸಾಕ್ಷರತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಸ್ಥೆಯಲ್ಲಿ ಪ್ರಪ್ರಥಮ ಬಾರಿಗೆ ಇಗಿಒ ಮತಯಂತ್ರ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಗಿದೆ ಎಂದು ಹೇಳಿದರು. ಪ್ರಭಾರ ಪ್ರಾಚಾರ್ಯರಾದ ಫಾರೂಕ್ ಸಿ. ಮಾತನಾಡಿ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು. ವಿದ್ಯಾರ್ಥಿಗಳಿಗೆ ಮತದಾನ ಮಾಡಲು ಗುರುತು ಚೀಟಿ ಅಳವಡಿಸಿದ್ದು ಆಧಾರ್ ಕಾರ್ಡ್ ದಾಖಲೆಯನ್ನು ಬಳಕೆ ಮಾಡಿ ಮತ ಚಲಾಯಿಸಿದರು.
ಮತದಾನ ಪ್ರಕ್ರಿಯೆಯಲ್ಲಿ ಉಪನ್ಯಾಸಕಿ ರಶ್ಮಿ ಬಿ. ಪ್ರಿಸೈಡಿಂಗ್ ಆಫಿಸರ್ ಗಾಯತ್ರಿ ಎಂ., ಜ್ಯೋತಿಕುಮಾರಿ ಕೆ., ನವ್ಯಶ್ರೀ ರೈ, ಪವಿತ್ರ ವೈ., ಪ್ರತಿಭಾ ರೈ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು. ಸೆಕ್ಟರ್ ಅಧಿಕಾರಿಯಾಗಿ ಕಮಲಾಕ್ಷ ಆನಡ್ಕ ಕಾರ್ಯನಿರ್ವಹಿಸಿದರು.