ಸೌದಿ ಅರೇಬಿಯಾ: ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ತುಳುನಾಡ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ತುಳುನಾಡ್ ಪ್ರೀಮಿಯರ್ ಲೀಗ್-ಸೀಝನ್ 5 ಕ್ರಿಕೆಟ್ ಪಂದ್ಯಾಟ ಸಮಾರೋಪ

0

ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ಮತ್ತು ತುಳುನಾಡ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಸುಧೀರ್ ರೆಂಟಲ್ ಮತ್ತು ಫಯಾಝ್ ಮಲ್ಪೆ ಇವರ ಪ್ರಾಯೋಜಕತ್ವದಲ್ಲಿ ತುಳುನಾಡ್ ಪ್ರೀಮಿಯರ್ ಲೀಗ್-ಸೀಝನ್ 5 ಸುಧೀರ್ ಕಪ್ -2024 ಸೌದಿ ಅರೇಬಿಯಾದ ಜಿದ್ದಾದಲ್ಲಿ ಸಮಾಪನಗೊಂಡಿತು.


ಈ ಪಂದ್ಯಾಕೂಟದಲ್ಲಿ ಕುಡ್ಲ ಬುಲ್ಸ್(ಜೈಸನ್ ಡಿಕೋಸ್ಟಾ), ಜಝಾ ಸ್ಪೋರ್ಟ್ಸ್(ಜಾವೇದ್ ಮಿಯಾಂದಾದ್), ಎಸ್ ಎಂ ಬುಲ್ಸ್(ಸಮದ್), ಕರಾವಳಿ ವಾರಿಯರ್ಸ್(ಅಲ್ತಾಫ್), ನೈಟ್ ರೈಡ್ ಕಾಂಬಾಡ್(ಫೌಜಾನ್ ಶೈಕ್), ಗ್ರೇ ಲೈನ್ (ಜೈನುದ್ದೀನ್ ಮುನ್ನೋರ್) ತಂಡಗಳು ಭಾಗವಹಿಸಿತ್ತು. ಈ ಪಂದ್ಯಾಕೂಟದಲ್ಲಿ ಆರು ಲೆಜೆಂಡ್ ತಂಡಗಳು ಭಾಗವಹಿಸಿತ್ತು.
ಅತಿಥಿಗಳಾಗಿ ಸುಧೀರ್ ರೆಂಟಲ್, ಫಯಾಝ್ ಮಲ್ಪೆ, ಜಾವೇದ್ ಮಿಯಾಂದಾದ್, ಸಲೀಂ ನಂದಾವರ, ಇರ್ಫಾನ್ ಕೃಷ್ಣಾಪುರ, ಇರ್ಷಾದ್ ಮಕ್ಕ, ಶಂಸುದ್ದೀನ್ ಉಚ್ಚಿಲ್, ಎಂ ಡಿ ಫಯಾಝ್ ಮಲ್ಪೆ, ಜೈನುದ್ದೀನ್ ಮುನ್ನೂರು, ಸಲೀಂ ನಂದಾವರ, ಎಂ ಡಿ ಗೌಸ್, ಮುಸ್ತಫ ಪುಣಚ, ಸಯೀದ್ ಆಸಿಫ್, ನಿಯಾಫ್, ಶಂಸುದ್ದೀನ್ ಉಚ್ಚಿಲ್, ಇಲ್ಯಾಸ್ ಸುರತ್ಕಲ್, ನಿಝ್ವಾನ್ ಬನ್ನೂರು, ಪಯಾಝ್ ಬಪ್ಪಳಿಗೆ, ಶರೀಫ್ ತೋಡಾರ್, ಇಲ್ಯಾಸ್ ಭಾಗವಹಿಸಿದ್ದರು.
ಅದೇ ರೀತಿ ಈ ಪಂದ್ಯಾಕೂಟದಲ್ಲಿ ಹುರೈಸ್ ಬಪ್ಪಳಿಗೆ, ತುಳುನಾಡು ಕ್ರಿಕೆಟ್ ಇದರ ಗೌರವಾಧ್ಯಕ್ಷರಾದ ಇಫ್ರಾಝ್ ಬೆಳುವಾಯ್,
ಫಯಾಝ್ ಮಲ್ಪೆ, ಜೈನುದ್ದೀನ್ ಮುನ್ನೂರ್, ನವಾಝ್ ಮಂಗಳ್ಪೇಟೆ, ಇಸ್ಮಾಯಿಲ್ ಖಾದರ್, ಶಂಸುದ್ದೀನ್ ಉಚ್ಚಿಲ್, ಸಿನಾನ್ ಪೆರ್ನೆ, ತಂಜಿಲ್ ವಾಮಂಜೂರು ಇವರನ್ನು ಸುಧೀರ್ ರೆಂಟಲ್ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಲೆಜೆಂಡ್ ಟ್ರೋಫಿ ವಿನ್ನರ್ಸ್ ಪ್ರಶಸ್ತಿ ಜೆ ಟಿ ಪಿ ಎಲ್ ತಮಿಳ್ನಾಡ್ ಪಾಲಾದರೆ ರನ್ನರ್ಸ್ ಸ್ಥಾನ ಜಿದ್ದಾ ಲೆಜೆಂಡ್ಸ್ ಪಾಲಾಯಿತು.
ಬೆಸ್ಟ್ ಬ್ಯಾಟ್ಸ್ ಮ್ಯಾನ್-ಶಮೀರ್ ರಾವ್ಥರ್, ಬೆಸ್ಟ್ ಬೌಲರ್-ಫುರ್ಕಾನ್ ಕರಾವಳಿ ವಾರಿಯರ್ಸ್, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್-ಹಾರೂನ್, ಮ್ಯಾನ್ ಆಫ್ ಸೀರೀಸ್ -ಫಿರೋಝ್ ಜೆಟಿಪಿಎಲ್ ಇವರ ಪಾಲಾಯಿತು.

ಅದೇ ರೀತಿ ಟಿಪಿಎಲ್ ಸೀಸನ್ 5 ಸುಧೀರ್ ಕಪ್ 2024 ಇದರ ವಿನ್ನರ್ಸ್ ಆಗಿ ಗ್ರೇ ಲೈನ್ ಕ್ರಿಕೆಟ್ ಕ್ಲಬ್ ಹೊರ ಹೊಮ್ಮಿತು. ಎಸ್ ಎಂ ಬಲ್ಸ್ ರನ್ನರ್ಸ್ ಸ್ಥಾನ ಪಡೆಯಿತು. ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಮೊಹಮ್ಮದ್ ಆಸಿಫ್ ತನ್ನದಾಗಿಸಿಕೊಂಡರು. ಬೆಸ್ಟ್ ಬ್ಯಾಟ್ಸ್ ಮ್ಯಾನ್ ಅಶ್ರಫ್ ಅಡ್ಡೂರು ಪಾಲಾಯಿತು. ಬೆಸ್ಟ್ ಬೌಲರ್ ಆಗಿ ಇರ್ಫಾನ್ ನೀರ್ಪಾದೆ ಪಡದುಕೊಂಡರು.
ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಅಶ್ರಫ್ ಅಡ್ಡೂರು ಪಡೆದುಕೊಂಡರು. ಪಂದ್ಯಾಕೂಟವನ್ನು ಹುರೈಸ್ ಪುತ್ತೂರು ಕೆ ಎಸ್ ಎ, ಸಿನಾನ್ ಪೆರ್ನೆ, ನೌಚ ಮೊಟ್ಟೆತಡ್ಕ ಇಫ್ರಾಝ್ ಬೆಳುವಾಯ್, ತಂಜಿಲ್ ವಾಮಂಜೂರ್, ಶಮೀರ್ ಅಹ್ಮದ್ ಬಾವ ಯಶಸ್ವಿಯಾಗಿ ಆಯೋಜಿಸಿದ್ದರು. ಈ ಪಂದ್ಯಾಕೂಟ ಏಳು ವಾರ ನಡೆಯಿತು.


LEAVE A REPLY

Please enter your comment!
Please enter your name here