ಪುತ್ತೂರು: ಇತ್ತೀಚೆಗೆ ನಿಧನರಾದ ಕುತ್ತೆತ್ತೂರು ನಾಯರ್‌ಕೋಡಿ ಆನಂದ ಶೆಟ್ಟಿಯವರ ಉತ್ತರ ಕ್ರಿಯಾದಿ ಸದ್ಗತಿ, ವೈಕುಂಠ ಸಮಾರಾಧನೆ ಹಾಗೂ ಶ್ರದ್ದಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಕುಮಾರಧಾರ ಸಭಾಭವನದಲ್ಲಿ ಜು.7ರಂದು ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಎಂ. ನಿರಂಜನ ರೈ ಮಠಂತಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ ಆನಂದ ಶೆಟ್ಟಿಯವರು ಉದ್ಯಮ ಕ್ಷೇತ್ರದ ಆಡಳಿತದಲ್ಲಿರುವಾಗ ಸತ್ಯ,ನ್ಯಾಯ ನೀತಿ ಧರ್ಮದಲ್ಲಿ ಸಾಗಿ ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಆರ್ಥಿಕ ಸೇವೆ ನೀಡಿ ಬದುಕು ಕಂಡವರು. ಅವರ ಆದರ್ಶ ಬದುಕು, ವ್ಯಕ್ತಿತ್ವ ಅವರ ಮನೆಯಲ್ಲಿ ಬೆಳಗಲಿ ಎಂದು ನುಡಿ ನಮನ ಸಲ್ಲಿಸಿದರು.
ತುಂಬೆತ್ತೋಡಿ ಮತ್ತು ನಾಯರ್‌ಕೋಡಿ ಕುಟುಂಬಸ್ಥರು,ಬಂಧುಗಳು ಹಾಗೂ ಹಲವಾರು ಮಿತ್ರರು ಹಿತೈಷಿಗಳು ಉಪಸ್ಥಿತರಿದ್ದರು. ಮೃತರ ಪತ್ನಿ ಸುಜಾತ ಎ.ಶೆಟ್ಟಿ, ಮಕ್ಕಳು ಅಳಿಯಂದಿರು, ಮೊಮ್ಮಕ್ಕಳು ಅತಿಥಿಗಳನ್ನು ಸತ್ಕರಿಸಿದರು.
ಮೌನ ಪ್ರಾರ್ಥನೆ- ಪುಷ್ಪಾರ್ಚನೆ:
ಅಗಲಿದ ಕುತ್ತೆತ್ತೂರು ನಾಯರ್‌ಕೋಡಿ ಆನಂದ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.