ಉಪ್ಪಿನಂಗಡಿ: ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಶ್ರೀನಿಧಿ ಆಯ್ಕೆ

0

ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 48 ನೇ ವರ್ಷದ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ ಆಯ್ಕೆಯಾಗಿದ್ದಾರೆ.

ಸಮಿತಿಯ ನಿಕಟಪೂರ್ವ ಅಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಯು. ಯತೀಶ್ ಶೆಟ್ಟಿ , ಕೋಶಾಧಿಕಾರಿಯಾಗಿ ಚಂದ್ರಹಾಸ ಹೆಗ್ಡೆ, ಜೊತೆ ಕಾರ್ಯದರ್ಶಿಗಳಾಗಿ ಶರತ್ ಕೋಟೆ ಹಾಗೂ ಕೀರ್ತನ್ ಕುಮಾರ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಸಭೆಯಲ್ಲಿ ನಿಕಟಪೂರ್ವ ಕಾರ್ಯದರ್ಶಿ ಹರೀಶ್ ನಾಯಕ್, ಪ್ರಮುಖರಾದ ಜಯಂತ ಪೊರೋಳಿ, ಎನ್. ಗೋಪಾಲ ಹೆಗ್ಡೆ, ಕೆ. ಜಗದೀಶ್ ಶೆಟ್ಟಿ, ವಿಧ್ಯಾಧರ ಜೈನ್, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಸುಂದರ ಆದರ್ಶನಗರ, ಸೂರಜ್ ಹೆಗ್ಡೆ, ಕೃಷ್ಣಪ್ರಸಾದ್, ವೇಣುಗೋಪಾಲ, ಕಿಶೋರ್ ಜೋಗಿ, ದೀಪಕ್ ಪೈ, ವೈಶಾಲಿ, ಚಂದ್ರಶೇಖರ್ ಮಡಿವಾಳ , ಗಂಗಾಧರ ಟೈಲರ್, ವೆಂಕಟೇಶ್ ಶೆಣೈ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here