ಪುತ್ತೂರು: ಕರಾವಳಿ ಪ್ರಾಧಿಕಾರದಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವ ಮೂಲಕ ಅಭಿವೃದ್ದಿಗೆ ಸಹಕಾರ ನೀಡುವಂತೆ ಯೋಜನೆಯ ಸಾಂಘಿಕ ಮತ್ತು ಸಂಯೋಜನಾ ಸಚಿವರೂ , ಕರಾವಳಿ ಪ್ರಾಧಿಕಾರದ ಅಧ್ಯಕ್ಷರೂ ಆದ ಡಿ ಸುಧಾಕರ್ ಅವರಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕ ಅಶೋಕ್ ರೈಯವರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳು ಆಗಬೇಕಾಗಿದ್ದು, ಕ್ಷೇತ್ರದ ಜನರಿಂದ ಬೇಡಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಲವಾರು ವರ್ಷಗಳಿಂದ ಜನರು ಮನವಿ ಮಾಡುತ್ತಿದ್ದರೂ ಅಭಿವೃದ್ದಿ ಕೆಲಸಗಳು ನಡೆದಿಲ್ಲ ಎಂಬ ಆರೋಪ ಕ್ಷೇತ್ರದ ಜನರಲ್ಲಿ ಇದ್ದು ಈ ಬಾರಿ ಪುತ್ತೂರಿಗೆ ಕರಾವಳಿ ಪ್ರಾಧಿಕಾರದಿಂದ ಹೆಚ್ಚು ಅನುದಾನವನ್ನು ನೀಡುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಸಚಿವರಿಗೆ ಶಾಸಕರು ಮನವಿ ಮಾಡಿದ್ದಾರೆ. ಶಾಸಕರ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ಅಭಿವೃದ್ದಿ ವಿಚಾರದಲ್ಲಿ ನೀವು ಸಲ್ಲಿಸಿದ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆಯನ್ನು ನೀಡಿದ್ದಾರೆ.
ಎಲ್ಲಿಂದೆಲ್ಲಾ ಅನುದಾನಗಳು ದೊರೆಯುತ್ತದೆಯೋ ಅಲ್ಲಿಂದ ಅದನ್ನು ತರುವ ಪ್ರಯತ್ನವನ್ನು ಮಾಡುತ್ತೇನೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಬೇಕು ಎಂಬುದು ನನ್ನ ಕನಸು. ನನ್ನ ಕ್ಷೇತ್ರದ ಜನರ ಬೇಡಿಕೆಯನ್ನು ಒಂದೊಂದಾಗಿ ಈಡೇರಿಸಬೇಕು ಎಂಬ ಉದ್ದೇಶದಿಂದ ವಾರದಲ್ಲಿ ಎರಡರಿಂದ ಮೂರು ದಿನ ಬೆಂಗಳೂರಿಗೆ ಬಂದು ಜನರ ಕೆಲಸವನ್ನು ಮಾಡುತ್ತಿದ್ದೇನೆ. ಅನುದಾನ ಕೊಡಬಹುದು ಎಂಬ ಪೂರ್ಣ ಭರವಸೆ ನನನ್ನಲ್ಲಿದೆ
ಅಶೋಕ್ ರೈ ಶಾಸಕರು ಪುತ್ತೂರು