ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಗೆ ನೂತನ ಶಾಲಾ ವಾಹನ ಹಸ್ತಾಂತರ

0

ಪುತ್ತೂರು: ಮಧುರಾ ಎಜುಕೇಷನಲ್ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಮೇನಾಲ ಇದಕ್ಕೆ ನೂತನ ಶಾಲಾ ವಾಹನವನ್ನು ಮಧುರಾ ಎಜುಕೇಶನಲ್ ಟ್ರಸ್ಟ್ ಇದರ ಸ್ಥಾಪಕ ಟ್ರಸ್ಟಿಯಾದ ಇತ್ತೀಚೆಗೆ ನಿಧನರಾದ ಹಾಜಿ ಅಬ್ದುಲ್ ಖಾದರ್ ಮಧುರಾ ಇವರ ನೆನಪಿನಲ್ಲಿ ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಇದರ ಪ್ರಾಂಶುಪಾಲರಾದ ರಾಜೀಶ್ ಕುಮಾರ್ ಮತ್ತು ಸಂಸ್ಥೆಯ ಅಡಳಿತ ಅಧಿಕಾರಿ ಅಬ್ದುಲ್ ರಹಿಮಾನ್ ಇವರಿಗೆ ಅಧ್ಯಕ್ಷರಾದ ಹನೀಫ್ ಮಧುರಾ ಇವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಧುರಾ , ಕೊ ಆರ್ಡಿನೇಟರ್ ಸೀಮಲ್ ಮಧುರಾ ಹನೀಫ್, ಅರವಿಂದ್ ಮೋಟಾರ್ಸ್ ಇದರ ಸೇಲ್ಸ್ ಮೇನೇಜರ್ ಕೀರ್ತನ್,
ಸಂಸ್ಥೆಯ ಸಿಬ್ಬಂದಿಗಳಾದ ಇಬ್ರಾಹಿಂ ಬಡಗನ್ನೂರು , ಮಹಮ್ಮದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here