ವಿಟ್ಲ: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (MEIF) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವತಿಯಿಂದ ಈಸ್ಟ್ ಝೋನ್ ಮೊಂಟೆಸ್ಸರಿ(KG) ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವು ಜು.13ರಂದು ವಿಟ್ಲದ ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಜರಗಿತು.
ಕಾರ್ಯಕ್ರಮವನ್ನು ಕನ್ವೀನರ್ ಶೈಖ್ ರಹ್ಮತುಲ್ಲ ಅವರು ಸ್ವಾಗತಿಸಿ, ಜನಪ್ರಿಯ ಸೆಂಟ್ರಲ್ ಸ್ಕೂಲ್ ಇದರ ನಿರ್ದೇಶಕರಾದ ನೌಶೀನ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಮ್ಇಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷರಾದ ರಶೀದ್ ವಿಟ್ಲ ಭಾಗವಹಿಸಿ, ಹೇಗೆ ನೀರು ಎತ್ತಲು ಬಾವಿಯೊಳಗೆ ಕೊಡ ಭಾಗಿಸಬೇಕೋ ಹಾಗೇನೇ ಇಂದು ತರಬೇತಿ ಪಡೆಯುವ ಶಿಕ್ಷಕರು ಬಾಗಿ, ಜ್ಞಾನ ವನ್ನು ಪಡೆದು ಮಕ್ಕಳಿಗೆ ಜ್ಞಾನದ ಧಾರೆ ಎಳೆಯಬೇಕೆಂದು ಶಿಕ್ಷಕಿಯರಿಗೆ ಕಿವಿಮಾತು ನೀಡಿದರು. ಮೀಫ್ ಒಕ್ಕೂಟದ ಅಧ್ಯಕ್ಷರಾದ ಮೂಸಬ್ಬ. ಪಿ.ಬ್ಯಾರಿ ರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಒಕ್ಕೂಟದ ಕಾರ್ಯಕ್ರಮ ಕನ್ವೀನರ್ ಮುಹಮ್ಮದ್ ಶಾರಿಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಡಳಿತ ಕಾರ್ಯದರ್ಶಿ ಅನ್ವರ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಪ್ರಾಂಶುಪಾಲರಾದ ಲಿಬಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ರವರು ವಂದಿಸಿದರು.
ಜನಪ್ರಿಯ ಸೆಂಟ್ರಲ್ ಸ್ಕೂಲ್, ಕಂಬಳಬೆಟ್ಟು ವಿಟ್ಲ ಈ ತರಬೇತಿ ಕಾರ್ಯಗಾರವನ್ನು ಪ್ರಾಯೋಜಿಸಿದ್ದು ಮಂಗಳೂರಿನ ಯೇನಪೋಯ ವಿದ್ಯಾಸಂಸ್ಥೆಯ ಅಕ್ಷರ ಹೌಸ್ ಆಫ್ ಚಿಲ್ಡ್ರನ್ ವಿಭಾಗದ ತರಬೇತುದಾರರು ತರಬೇತಿಯನ್ನು ಕೈಗೊಂಡರು. ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯ ತಾಲೂಕುಗಳ 21 ವಿದ್ಯಾಸಂಸ್ಥೆಗಳ ಒಟ್ಟು 90 ಶಿಕ್ಷಕರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಯೇನಪೋಯ ವಿದ್ಯಾ ಸಂಸ್ಥೆಯ ಮುಖ್ಯ ತರಬೇತುದಾರರಾದ ಶ್ರೀಮತಿ ತ್ರಿಶಾ ಹಾಗೂ ಇತರ 7 ಸದಸ್ಯರ ತಂಡವು ಅತ್ಯಂತ ಯಶಸ್ವಿಯಾಗಿ ಕಾರ್ಯಾಗಾರವನ್ನು ನೆರವೇರಿಸಿದರು.