8 ಲಕ್ಷದಲ್ಲಿ ಭವ್ಯ ಗುಡಿ ನಿರ್ಮಾಣ | ಕ್ಷೇತ್ರದ ಭಕ್ತಿ ಹಾಡು ಬಿಡುಗಡೆ

0

ಮುಂಡೂರು ಕೇದಗೆದಡಿಯಲ್ಲಿ ಕೊರಗಜ್ಜ ದೈವದ ಪ್ರತಿಷ್ಠಾಪನೆ ಸಂಭ್ರಮ

ಪುತ್ತೂರು : 15 ವರ್ಷಗಳಿಂದ ತುಳುನಾಡ ಕಾರಣಿಕ ದೈವ ಕೊರಗಜ್ಜ ಹಾಗೂ ಭೈರವ ಮತ್ತು ಗುಳಿಗ ದೈವಗಳಿಗೆ ಬರೀ ಕಟ್ಟೆಯೊಂದನ್ನು ಕಟ್ಟಿ , ಅಗೇಲು ,ಕೋಲ ಸೇವೆ ನೀಡುತ್ತಾ ಬಂದಿರುವ ತಾಲೂಕಿನ ಮುಂಡೂರು ಕೇದಗೆದಡಿ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಜು.13 ರಂದು ಕೊರಗಜ್ಜ ದೈವದ ಬಿಂಬ ಪ್ರತಿಷ್ಠಾಪನೆಯೊಂದಿಗೆ ಭೈರವ ಮತ್ತು ಗುಳಿಗ ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆಯೂ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನೆರವೇರಿತು.

ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ದೈವಗಳ ಗುಡಿಯು ತೋರಣಗಳ ಜತೆಗೆ ಹೂವಿನ ಹಾಗೂ ದೀಪಗಳ ಅಲಂಕಾರದಿಂದ ಕಂಗೊಳಿಸಿದವು.ಶಶಿಧರ್ ಭಟ್ ಮುಕ್ರಂಪಾಡಿ ಇವರ ಮಾರ್ಗದರ್ಶನದಲ್ಲಿ , ಪುರೋಹಿತ ನಾರಾಯಣ ಭಟ್ ಬಳಗ ಪ್ರತಿಷ್ಠಾಪನೆ ಕಾರ್ಯವನ್ನು ಧಾರ್ಮಿಕ ವಿಧಾನದೊಂದಿಗೆ ನೆರವೇರಿಸಿ ಕೊಟ್ಟರು.


ಜು.13 ರ ಬೆಳಗ್ಗೆ 8.51 ರ ಮುಹೂರ್ತದಲ್ಲಿ ಕೇದಗೆದಡಿ ಶ್ರೀ ಕ್ಷೇತ್ರದಲ್ಲಿ ಕೊರಗಜ್ಜ ದೈವದ ಬಿಂಬ ಪ್ರತಿಷ್ಠಾಪನೆ ಮತ್ತು ಪರಿವಾರ ದೈವಗಳ ಪುನ‌ರ್ ಪ್ರತಿಷ್ಠಾಪನೆ ಜರುಗಿತು.
ಇದಕ್ಕೂ ಮೊದಲು ಗಣಹೋಮ ಕಾರ್ಯ ನೆರವೇರಿತು. ಆ ಬಳಿಕ ಕುಣಿತ ಭಜನೆಯೂ ಪ್ರಾರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆ ನಡೆದು , ಬಳಿಕ ಪ್ರಸಾದ ವಿತರಣೆ ಮಾಡಲಾಯಿತು. ತದನಂತರ ಮಹಾ ಅನ್ನಸಂತರ್ಪಣೆಯೂ ನಡೆಯಿತು.ಈ ವೇಳೆ ಕ್ಷೇತ್ರದ ಭಕ್ತರೆಲ್ಲರೂ ಪಾಲ್ಗೊಂಡಿದ್ದರು.

ಕೇದಗೆದಡಿತ್ತ ತುಡರ್ ಬಿಡುಗಡೆ…
ಪವನ್ ಕುಮಾರ್ ನಿರ್ಮಾಣದ , ಯಶ್ವಿತ್ ಕುಮಾರ್ ಇವರ ಸಾಹಿತ್ಯದಲ್ಲಿ ವೆಂಕಟೇಶ್ ಅರಳ ಮತ್ತು ಅಶ್ವಿನಿ ಇವರುಗಳ ಸುಮಧುರ ಕಂಠದಿಂದ ರಚನೆಗೊಂಡಿರುವ “ಕೇದಗೆದಡಿತ್ತ ತುಡರ್ ” ಕೊರಗಜ್ಜನ ಸುಗಿಪುದ ಪದ ಭಕ್ತಿಗೀತೆಯ ವಿಡಿಯೋ ಮತ್ತು ಅಡಿಯೋವನ್ನು ಈ ವೇಳೆ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು.
ಕ್ಷೇತ್ರದ ಧರ್ಮದರ್ಶಿ ಕೃಷ್ಣ ನಾಯ್ಕ ,ಗುಲಾಬಿ ದಂಪತಿ ಬಿಡುಗಡೆಗೊಳಿಸಿ ,ಹಾರೈಸಿದರು.ಕ್ಷೇತ್ರದ ಭಕ್ತಿ ಗೀತೆಯನ್ನು ಯೂಟ್ಯೂಬ್ ಲಿಂಕ್( ಕೇದಗೆದಡಿತ್ತ ತುಡರ್) ಮೂಲಕ ಕೇಳಲು, ನೋಡಲು ಸಾಧ್ಯವೆಂದು ಅವರು ಈ ವೇಳೆ ಮಾಹಿತಿ ನೀಡಿದರು.
ಮಹೇಶ್ ಕುಮಾರ್ ಕೇದಗೆದಡಿ , ಪಲ್ಲವಿ ಮಹೇಶ್ ,ಮಾ.ಅನ್ವಿತ್ , ಶಿವರಂಜಿನಿ ಹಾಗೂ ನಿರಂಜನ ಜೆಪ್ಪಿನಮೊಗರು ಸಹಿತ ಕ್ಷೇತ್ರದ ಭಕ್ತರು ಈ ಸಂಧರ್ಭದಲ್ಲಿ ಹಾಜರಿದ್ದರು.

ಸೇವೆಗಳು : ಕ್ಷೇತ್ರದಲ್ಲಿ ಕೊರಗಜ್ಜ ತಂಬಿಲ ಸೇವೆ ಹಾಗೂ ಪ್ರತಿ ತಿಂಗಳ ಸಂಕ್ರಮಣದಂದು ಸಂಜೆ 4.30 ಕ್ಕೆ ಅಗೇಲು ಸೇವೆಯೂ ಕೂಡ ನಡೆಯುತ್ತದೆಯೆಂದು ಧರ್ಮದರ್ಶಿ ಕೃಷ್ಣ ನಾಯ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here