ಅಧ್ಯಕ್ಷೆ : ನಳಿನಿ ಚಂದ್ರಶೇಖರ್ ಕಾರ್ಯದರ್ಶಿ: ಸುಮನಾ ರವೀಂದ್ರ
ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ದೇವಿ ಮಹಿಳಾ ಮಂಡಳಿಯವರಿಂದ ಆ.16ರಂದು ನಡೆಯಲಿರುವ 22ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಜು.9ರಂದು ನಡೆಯಿತು.
ನೂತನ ಅಧ್ಯಕ್ಷೆಯಾಗಿ ನಳಿನಿ ಚಂದ್ರಶೇಖರ್ ದಲ್ಕಾಜೆಗುತ್ತು, ಕಾರ್ಯದರ್ಶಿಯಾಗಿ ಸುಮನಾ ರವೀಂದ್ರ ಪಟಿಕಲ್ಲು ಆಯ್ಕೆಯಾದರು.
ಶ್ರೀದೇವಿ ವಿದ್ಯಾಕೇಂದ್ರದ ಅಮೃತ ಭಾರತಿ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಶ್ರೀದೇವಿ ಮಹಿಳಾ ಮಂಡಳಿಯ ಸಂಚಾಲಕಿ ಗಂಗಮ್ಮ.ಪಿ, ಕೋಶಾಧಿಕಾರಿ ರಜನಿ ಅಗ್ರಾಳ, ಸದಸ್ಯರಾದ ರೇಖಾ ಬೈಲುದರ್ಖಾಸು, ನಳಿನಾಕ್ಷಿ ಕಲ್ಲಾಜೆ, ಲೀಲಾವತಿ ದೇವಿನಗರ ಉಪಸ್ಥಿತರಿದ್ದರು.