ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ ಶ್ರೀ ಮಹಾದೇವಿ ಹುಲಿವೇಷ ತಂಡ ಕಬಕ ಇವರಿಂದ ಹುಲಿವೇಷದ ನೃತ್ಯವನ್ನು ಸೆ.23ರಂದು ನೀಡಲಾಯಿತು.

ಈ ತಂಡದಲ್ಲಿ ನಿಖಿತ್, ಶರತ್, ದೀಕ್ಷಿತ್, ಸಂದೀಪ್, ಯಜ್ಞೇಶ್, ಜನ್ಮಿತ್, ಅನುಶ್, ಭವಿತ್, ಲಿಖಿತ್, ಮಿಥುನ್, ಸಂತೋಷ್ ಮುರ ತೀಯ ಸಮಾಜದ ಅಧ್ಯಕ್ಷರು ಭಾಗವಹಿಸಿದ್ದರು. ಸಂಸ್ಥೆಯ ಸಂಚಾಲಕ ಗೋಕುಲ್ನಾಥ್ ಪಿ.ವಿ ಇವರು ಶ್ರೀ ಮಹಾದೇವಿ ಹುಲಿವೇಷ ತಂಡದವರಿಗೆ ಸ್ಮರಣಿಕೆ ನೀಡಿ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳೆಲ್ಲರು ಉಪಸ್ಥಿತರಿದ್ದರು.