ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘ- ಅಧ್ಯಕ್ಷೆಯಾಗಿ ಗೀತಾ ಮೋಹನ್ ರೈ ಪ್ರಧಾನ ಕಾರ್ಯದರ್ಶಿ ಕುಸುಮ ಶೆಟ್ಟಿ, ಕೋಶಾಧಿಕಾರಿ ಅರುಣಾ ರೈ

0

ಪುತ್ತೂರು: ತಾಲ್ಲೂಕು ಮಹಿಳಾ ಬಂಟರ ಸಂಘದ ನೂತನ ಅಧ್ಯಕ್ಷೆಯಾಗಿ ಹಿರಿಯ ರಾಜಕೀಯ ನೇತಾರ ನರಿಮೊಗರು ಮೋಹನ್ ರೈಯವರ ಪತ್ನಿ ಗೀತಾ ಮೋಹನ್ ರೈರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜು. 17 ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿದ ತಾಲ್ಲೂಕು ಮಹಿಳಾ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿರವರ ಅಧ್ಯಕ್ಷತೆಯಲ್ಲಿ ಆಯ್ಕೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಯಾಗಿ ಸವಣೂರಿನ ಕುಸುಮ ಪಿ.ಶೆಟ್ಟಿ ಕೆರೆಕೋಡಿ ಹಾಗೂ ಕೋಶಾಧಿಕಾರಿ ಯಾಗಿ ನ್ಯಾಯವಾದಿ ಅರುಣಾ ಡಿ ರೈ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here