ನೆಲ್ಯಾಡಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಘಾಟ್ ಪ್ರದೇಶದ ಹಲವೆಡೆ ಗುಡ್ಡ ಕುಸಿತದ ಪ್ರಕರಣಗಳು ಉಂಟಾಗುತ್ತಿವೆ. ಮಾರ್ನಳ್ಳಿ ದೊಡ್ಡತಪ್ಪಲು ಪ್ರದೇಶದಲ್ಲಿ ಗುಡ್ಡ ಕುಸಿದು ತಡರಾತ್ರಿ ಓಮಿನಿ ವಾಹನ ಮಣ್ಣಿನಡಿ ಸಿಲುಕಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ಮೂಲಕ ಪ್ರಯಾಣವನ್ನು ನಿಷೇಧ ಮಾಡಿ ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇದರಿಂದಾಗಿ ಇದೀಗ ಗುಂಡ್ಯದಿಂದ ಎಲ್ಲಾ ವಾಹನಗಳನ್ನು ತಡೆಹಿಡಿದರ ಪರಿಣಾಮವಾಗಿ ಸಣ್ಣ ವಾಹನದಿಂದ ಹಿಡಿದು ಘನ ವಾಹನದವರೆಗೆ ರಸ್ತೆಯಲ್ಲಿ ಪಾರ್ಕ್ ಮಾಡಿದ ಕಾರಣ ಸ್ಥಳೀಯ ಸಾರ್ವಜನಿಕರಿಗೆ, ಧರ್ಮಸ್ಥಳದಿಂದ-ಸುಬ್ರಹ್ಮಣ್ಯಕ್ಕೆ ತೆರಳುವ ಯಾತ್ರಾತ್ರಿಗಳಿಗೆ, ಉದ್ಯೋಗಕ್ಕೆ ತೆರಳುವವರಿಗೆ, ತುರ್ತು ಸೇವೆಗಳಿಗಾಗಿ ಆಂಬುಲೆನ್ಸ್ ಕೂಡ ಸಂಚರಿಸದ ರೀತಿಯಲ್ಲಿ ರಸ್ತೆಯ ಎರಡು ಇಕ್ಕೆಲಗಳಲ್ಲಿ ಹಾಗೂ ರಸ್ತೆಯ ಮಧ್ಯದಲ್ಲಿ ವಾಹನ ಪಾರ್ಕಿಂಗ್ ಮಾಡಿರುವುದರಿಂದ ಸಂಚರಿಸಲು ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಬೇಕಾಗಿದೆ. ಎಂದು ಶಿರಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಕಾರ್ತಿಕೇಯನ್.ಕೆ.ಎಸ್ ತಿಳಿಸಿದ್ದಾರೆ.
ಸುಳ್ಯ, ಸಂಪಾಜೆ,ಮಡಿಕೇರಿ ಮೂಲಕ ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ರಾತ್ರಿ ವೇಳೆ ವಾಹನಗಳು ಸಂಚರಿಸದಂತೆ ಕೊಡಗು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ, ಹೆದ್ದಾರಿ ರಸ್ತೆಯೂ ಬಂದ್ ಆಗಿರುವ ಕಾರಣ ಮಂಗಳೂರು ಮತ್ತು ಬೆಂಗಳೂರು ನಡುವಿನ ಸಂಪರ್ಕ ಬಹುತೇಕ ಕಡಿತಗೊಂಡಿದೆ. ಇನ್ನು ಚಾರ್ಮಾಡಿ ಘಾಟ್ ಒಂದೇ ಉಳಿದಿದ್ದು ಈ ರಸ್ತೆಯಲ್ಲಿ ರಸ್ತೆಯಲ್ಲಿ ವಾಹನದಟ್ಟನೆ ಹೆಚ್ಚಾಗಿದೆ.
ಮಾರ್ನಳ್ಳಿ ದೊಡ್ಡತಪ್ಪಲು ಪ್ರದೇಶದ ಅಲ್ಲಲ್ಲಿ ಭೂ ಕುಸಿತ ಭೂಕುಸಿತ ಇನ್ನಷ್ಟು ಸಂಭವಿಸುವ ಸಾಧ್ಯತೆಗಳಿವೆ. ಜುಲೈ 18 ರಿಂದ ಅನ್ವಯವಾಗುವಂತೆ ಈ ರಸ್ತೆಯ ಮೂಲಕ ಪ್ರಯಾಣ ಮಾಡದಂತೆ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಆದೇಶಿಸಿದ್ದಾರೆ. ರಸ್ತೆ ದುರಸ್ತಿ ಆಗುವ ತನಕ ಎಲ್ಲ ರೀತಿಯ ವಾಹನ ಸಂಚಾರ ನಿಷೇಧ ಮಾಡಿ ಬೆಂಗಳೂರಿನಿಂದ -ಮಂಗಳೂರಿಗೆ ತೆರಳುವ ವಾಹನಗಳು ಚಾರ್ಮಾಡಿ ಘಾಟ್ ಮೂಲಕ ಸಂಚರಿಸಲು ಸೂಚನೆ ನೀಡಿದ್ದಾರೆ.