





ಉಪ್ಪಿನಂಗಡಿ: ಇಲ್ಲಿನ ಆರ್ತಿಲ ಎಂಬಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳನ್ನು ಜು.19ರಂದು ಗೃಹ ರಕ್ಷಕದಳದ ಪ್ರವಾಹ ರಕ್ಷಣಾ ತಂಡ ತೆರವುಗೊಳಿಸಲಾಯಿತು.
ಇಲ್ಲಿ ಒಂದು ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರೆ, ಇನ್ನೊಂದು ಮರ ಬೀಳುವ ಸ್ಥಿತಿಯಲ್ಲಿದ್ದು, ಅಪಾಯಕಾರಿಯಾಗಿತ್ತು. ಪ್ರವಾಹ ರಕ್ಷಣಾ ತಂಡದ ಉಸ್ತುವಾರಿಯಾದ ಉಪತಹಶೀಲ್ದಾರ್ ಚೆನ್ನಪ್ಪ ಗೌಡರವರ ಸೂಚನೆ ಮೇರೆಗೆ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ., ಎ.ಎಸ್.ಎಲ್. ಜನಾರ್ದನ ಆಚಾರ್ಯ, ವಸಂತ ಕೆ., ಸೋಮನಾಥ ಮರಗಳನ್ನು ತೆರವುಗೊಳಿಸಿದರು.















