ಕುಂಬ್ರ: ಕೊಲ್ಲಾಜೆಯಲ್ಲಿ ಕುಸಿದುಬಿದ್ದ ಕೋಳಿ ಶೆಡ್; 5 ಸಾವಿರ ಕೋಳಿಗಳ ಸಾವು, 15 ಲಕ್ಷ ರೂ.ನಷ್ಟ 

0

ಪುತ್ತೂರು: ಎಡೆಬಿಡದೆ ಸುರಿಯುತ್ತಿರುವ ಮಳೆ ಗಾಳಿಗೆ ಕೋಳಿ ಸಾಕಾಣಿಕೆ ಕಟ್ಟಡ ಕುಸಿದು ಬಿದ್ದು ಸುಮಾರು 5 ಸಾವಿರ ಕೋಳಿಗಳು ಸಾವನ್ನಪ್ಪಿದ ಘಟನೆ ಜು.18 ರಂದು ಸಂಜೆ ಕೊಲ್ಲಾಜೆಯಲ್ಲಿ ನಡೆದಿದೆ.

ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲಾಜೆ ಎಂಬಲ್ಲಿ ರಾಜ್ ಮೋಹನ್ ರೈ ಎಂಬವರಿಗೆ ಸೇರಿದ ಕೋಳಿ ಸಾಕಾಣಿಕೆ ಕಟ್ಟಡ ಮಳೆಗೆ ದಿಢೀರನೆ ಕುಸಿದು ಬಿದ್ದಿದೆ. ಕೋಳಿ ಸಾಕಾಣಿಕೆ ಕಟ್ಟಡದಲ್ಲಿ ಸುಮಾರು 5 ಸಾವಿರ ಕೋಳಿಗಳು ಇತ್ತೆನ್ನಲಾಗಿದೆ. ಎಲ್ಲಾ ಕೋಳಿಗಳು ಸಾವನ್ನಪ್ಪಿದೆ. ಘಟನೆಯಿಂದ ಸುಮಾರು 15 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಗೋಪಿನಾಥ್, ಕಾಂಗ್ರೆಸ್ ವಲಯ ಅಧ್ಯಕ್ಷ ಇಕ್ಬಾಲ್ ಹುಸೈನ್ ಕೌಡಿಚ್ಚಾರ್, ಎಸ್ ಡಿಎಂಸಿ ಅಧ್ಯಕ್ಷ ದಶರಥ ಸೇರಿದಂತೆ ಹಲವು ಮಂದಿ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here