ಮರ ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಪ್ರಕೃತಿ ಸಮೃದ್ಧವಾಗುತ್ತದೆ – ಮದನ್; ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಿಂದ ಗಿಡ ನೆಡುವ ಕಾರ್ಯಕ್ರಮ

0

ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಗ್ರಾಮ ವಿಕಾಸ ಯೋಜನೆ, ಶೌರ್ಯ ವಿಪತ್ತು ನಿರ್ವಹಣಾ ತಂಡ ಬೆಟ್ಟಂಪಾಡಿ, ಶಾಂತದುರ್ಗಾ ದೇವಸ್ಥಾನ ನಿಡ್ಪಳ್ಳಿ ಇವುಗಳ ಜಂಟಿ ಆಶ್ರಯದಲ್ಲಿ ಗಿಡ ನೆಡುವ ಕಾರ್ಯಕ್ರಮವು ಶಾಂತದುರ್ಗಾ ದೇವಸ್ಥಾನ ನಿಡ್ಪಳ್ಳಿಯಲ್ಲಿ ವಠಾರದಲ್ಲಿ ಜು. 18ರಂದು ನಡೆಯಿತು.

ಮುಖ್ಯ ಅತಿಥಿ ಪಾಣಾಜೆ ಶಾಖೆ ಉಪವಲಯ ಅರಣ್ಯಾಧಿಕಾರಿ ಮದನ್ ರವರು ಮಾತನಾಡಿ ‘ತುಳುನಾಡಿನ ಜನರು ಪ್ರಕೃತಿ ಆರಾಧಕರು ನಾಗಬನ ಮರ-ಗಿಡಗಳಲ್ಲಿ ದೇವರನ್ನು ಕಾಣುವ ಮನೋಭಾವ ಹೊಂದಿದವರು. ಈ ನಿಟ್ಟಿನಲ್ಲಿ ನಾವು ಮರ-ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಪ್ರಕೃತಿ ಸಮೃದ್ಧವಾಗುತ್ತದೆ. ಬೇರೆ ಬೇರೆ ಕಾರಣಗಳಿಂದ ಮರಗಳನ್ನು ಕಡಿಯುತ್ತಿರುವ ಈ ಸಮಯದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ನಮ್ಮ ಕರ್ತವ್ಯವು ಹೌದು. ಇದರಿಂದ ಜನರ ಆರೋಗ್ಯವು ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಸಂಧ್ಯಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ಶಾಂತದುರ್ಗಾ ದೇವಸ್ಥಾನದ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಲಿಂಗರಾಜು ಬೀಟ್ ಫಾರೆಸ್ಟರ್ ಅರಿಯಡ್ಕ, ಸುನಿಶ್ ಬೀಟ್ ಫಾರೆಸ್ಟರ್ ಅರ್ಲಪದವು, ಪ್ರಜ್ಞ ಬೀಟ್ ಫಾರೆಸ್ಟರ್ ಬೆಟ್ಟಂಪಾಡಿ, ನಾಗೇಶ್ ಗೌಡ ಪುಳಿತ್ತಡಿ ಮಾಜಿ ಅಧ್ಯಕ್ಷರು ಶಾಂತದುರ್ಗ ದೇವಸ್ಥಾನ ನಿಡ್ಪಳ್ಳಿ, ಕುಮಾರ ನರಸಿಂಹ ಭಟ್ ಬುಲೆನಡ್ಕ ಡೈರೆಕ್ಟರ್ ಸಿಎ ಬ್ಯಾಂಕ್ ಪಾಣಾಜೆ, ದಿವಾಕರ ರೈ ನಾಕಾಪಾಡಿ, ಮಂಜುನಾಥ ರೈ ಆನಡ್ಕ, ಹರೀಶ್ ಗೌಡ, ಶೌರ್ಯ ವಿಪತ್ತು ನಿರ್ವಹಣಾ ತಂಡ ಬೆಟ್ಟಂಪಾಡಿ ಇದರ ಸದಸ್ಯರು, ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರು ರಾಜೇಶ್ ನೆಲ್ಲಿತಡ್ಕ, ಶಿಕ್ಷಕ ವೃಂದದವರು, ಪೋಷಕರು, ಊರಿನವರು ಉಪಸ್ಥಿತರಿದ್ದು ವಿವಿಧ ತಳಿಯ 40ಕ್ಕೂ ಹೆಚ್ಚು ಗಿಡಗಳನ್ನು ಗಿಡಗಳನ್ನು ನೆಟ್ಟು ಕಾರ್ಯಕ್ರಮ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here