ಬೆಂಗಳೂರು ಬಿಎಂಟಿಸಿಯಲ್ಲಿ ಚಾಲಕ ಹುದ್ದೆ – ಯುವ ಚಾಲಕರು ಅರ್ಜಿ ಸಲ್ಲಿಸುವಂತೆ ಶಾಸಕ ಅಶೋಕ್ ರೈ ಮನವಿ

0

ಪುತ್ತೂರು: ಬೆಂಗಳೂರಿನ ಬಿಎಂಟಿಸಿಯಲ್ಲಿ 50 ಚಾಲಕ ಹುದ್ದೆ ಖಾಲಿ ಇದ್ದು ಇದರ ಭರ್ತಿಗೆ ಬಿಎಂಟಿಸಿ ನಿರ್ಧರಿಸಿದ್ದು ಹೆವಿ ಲೈಸೆನ್ಸ್ ಹೊಂದಿರುವ ಯುವ ಚಾಲಕರು ಹುದ್ದೆಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.
ಒಟ್ಟು ಚಾಲಕ ಹುದ್ದೆ 50 ಇದ್ದು ಉತ್ತಮ ವೇತನವೂ ಇರುತ್ತದೆ. ವೇತನವಾಗಿ ಆರಂಭದಲ್ಲಿ 28 ಸಾವಿರ ರೂ. ಮತ್ತು ಒ ಟಿ ಸೌಲಭ್ಯವೂ ಇರುತ್ತದೆ. ಕನಿಷ್ಠ ತಿಂಗಳಿಗೆ 40 ಸಾವಿರ ರೂ ಸಂಬಳ ಮಾಡಿಕೊಳ್ಳಲು ಅವಕಾಶವಿರುತ್ತದೆ. ಆಸಕ್ತ ಚಾಲಕರು ಪುತ್ತೂರು ಶಾಸಕರ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ರೈ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ (ಮೊ: 9731461380) ಅಥವಾ ಟ್ರಸ್ಟ್ ಸಿಬ್ಬಂದಿ ಲಿಂಗಪ್ಪ ( ಮೊ: 9449663719) ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here