ಕಡಬ: ಸರ್ ಎಂ ವಿಶ್ವೇಶ್ವರಯ್ಯ ನವರ ಜನುಮದಿನದ ಪ್ರಯುಕ್ತ ಬೆಥನಿ ಸಂಸ್ಥೆಯಲ್ಲಿ ಅಭಿಯಂತರರ ದಿನ (ಇಂಜಿನಿಯರ್ಸ್ ಡೇ) ಆಚರಿಸಲಾಯಯಿತು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ಅವರು ಸರ್ ಎಂ ವಿಶ್ವೇಶ್ವರಯ್ಯನವರ ಜೀವನಯಾನದ ಸಾಧನೆ ಮತ್ತು ದೇಶ-ವಿದೇಶಕ್ಕೆ ಕೊಟ್ಟ ಕೊಡುಗೆ ಬಗ್ಗೆ ಕಿರು ಪರಿಚಯವನ್ನು ನೀಡಿದರು. ಸಂಸ್ಥೆಯ ಪ್ರಾಚಾರ್ಯರು ಮಾತನಾಡಿ ಶುಭ ಹಾರೈಸಿದರು.
ಸರ್ ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಿ.ತ.ಅಧಿಕಾರಿ ಸುಬ್ರಾಯ ನಾಯಕ್ ರವರು ಕಾರ್ಯಕ್ರಮದ ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ನೆರವೇರಿಸಿದರು.
