ಪುತ್ತೂರು: ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿಯ ತಿರುವಿನಲ್ಲಿನ ರಸ್ತೆಯಲ್ಲಿದ್ದ ಮಣ್ಣಿನ ರಾಶಿಯನ್ನು ಜು.21 ರಂದು ಮೊಟ್ಟೆತ್ತಡ್ಕದ ಕೆಲ ಯುವಕರು ಶ್ರಮದಾನದ ಮೂಲಕ ತೆರವೊಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.
ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದ ಮಾರ್ಗದಲ್ಲಿ ಮಣ್ಣಿನ ರಾಶಿ ತುಂಬಿದ್ದು ಮಾತ್ರವಲ್ಲ ರಸ್ತೆ ಮಧ್ಯೆಯೇ ನೀರು ತುಂಬಿಕೊಂಡು ಪಾದಚಾರಿಗಳಿಗೆ ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕೆ ಹಿನ್ನೆಡೆ ಉಂಟಾಗಿತ್ತು. ಆದಿತ್ಯವಾರ ರಜಾ ದಿನವಾಗಿದ್ದರಿಂದ ಕೆಲ ಯುವಕರು ಸೇರಿಕೊಂಡು ರಸ್ತೆಯಲ್ಲಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ. ಶ್ರಮದಾನದ ಕಾರ್ಯದಲ್ಲಿ ಯುವಕರಾದ ಯೋಗೀಶ್, ಹರೀಶ್ ಪ್ಲಂಬರ್, ಚೇತನ್, ಸುಪ್ರೀತ್, ದಕ್ಷಿತ್, ಮಿಥುನ್, ರಾಧಾಕೃಷ್ಣ, ಕಾರ್ತಿಕ್, ಅವಿನಾಶ್, ಕೇಶವರವರು ಪಾಲ್ಗೊಂಡಿದ್ದರು.