ಅಧ್ಯಕ್ಷ ವಸಂತಮೂಲ್ಯ, ಕಾರ್ಯದರ್ಶಿ ಜಯಲಕ್ಷ್ಮಿ
ಪುತ್ತೂರು: ಪುತ್ತೂರು ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕೊಂಬೆಟ್ಟು ಇಲ್ಲಿನ ಉಪ ಪ್ರಾಂಶುಪಾಲ ವಸಂತ ಮೂಲ್ಯ ಮತ್ತು ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇಲ್ಲಿನ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಎ ಆಯ್ಕೆಗೊಂಡಿದ್ದಾರೆ.
ಜು.20ರಂದು ಪುತ್ತೂರು ಕೊಂಬೆಟ್ಟು ಬಂಟರ ಭವನದಲ್ಲಿ ನಡೆದ ಪುತ್ತೂರು ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರುಗಳಾಗಿ ಸರ್ಕಾರಿ ಪ್ರೌಢಶಾಲೆ ಪಾಪೆ ಮಜಲು ಇಲ್ಲಿನ ಮುಖ್ಯ ಶಿಕ್ಷಕ ಮೋನಪ್ಪ ಪೂಜಾರಿ, ಬಿಳಿನೆಲೆ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸತೀಶ್ ಭಟ್ ರಾಮಕುಂಜ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ರೈ. ಜತೆ ಕಾರ್ಯದರ್ಶಿಯಾಗಿ ಸಂತ ವಿಕ್ಟರನ ಬಾಲಿಕ ಪ್ರೌಢಶಾಲೆಯ ಮುಖ್ಯಗುರು ರೋಸಲಿನ್, ಕೋಶಾಧಿಕಾರಿಯಾಗಿ ಸಂತ ಫಿಲೋಮಿನಾ ಪ್ರೌಢ ಶಾಲೆಯ ಮುಖ್ಯಗುರು ಫಾ. ಮ್ಯಾಕ್ಸಿಮ್ ಡಿಸೋಜ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಿವಕುಮಾರ್ ಸರಕಾರಿ ಪ್ರೌಢಶಾಲೆ ಮಂಜುನಾಥ ನಗರ, ಜಲಜಾಕ್ಷಿ ನೆಲ್ಲಿಕಟ್ಟೆ ಡಾ. ಶಿವರಾಮ ಕಾರಂತ ಪ್ರೌಢಶಾಲೆ, ಮೋಹನಾಂಗಿ ಮೌಂಟ್ನ್ ವ್ಶೂ ಪ್ರೌಢಶಾಲೆ ಸಾಲ್ಮರ, ತೋಮಸ್ ಸಂತ ಜಾರ್ಜ್ ಪ್ರೌಢಶಾಲೆ ನೆಲ್ಯಾಡಿ, ಜಯಮಾಲಾ ಸಾಂದೀಪನಿ ಪ್ರೌಢಶಾಲೆ ನರಿಮೊಗರು, ಶೈಲಾಶ್ರೀ ಸರಸ್ವತಿ ಪ್ರೌಢಶಾಲೆ ಕಡಬ ಅವರು ಆಯ್ಕೆಗೊಂಡಿದ್ದಾರೆ. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸಭೆಯ ಅನುಮೋದನೆಯೊಂದಿಗೆ ನಿರ್ಗಮನ ಅಧ್ಯಕ್ಷ ಸರ್ವೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಮ್ ಶೆಟ್ಟಿ ನಡೆಸಿಕೊಟ್ಟರು.