ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿ-ವಿಧಾನಸಭಾ ಅಧಿವೇಶನದಲ್ಲಿ ಪ್ರತಿಧ್ವನಿಸಿದ ಬೇಡಿಕೆ

0

ಬೆಂಗಳೂರು: ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಮಂಗಳವಾರ ವಿಧಾನಸಭಾ ಅಧಿವೇಶನದಲ್ಲಿ ಒಕ್ಕೊರಳ ಆಗ್ರಹ ಮತ್ತೆ ಪ್ರತಿಧ್ವನಿಸಿತು. ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಸರಕಾರಕ್ಕೆ ಮುತುವರ್ಜಿ ಇದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಉತ್ತರ ನೀಡಿದರು.ಸದನದಲ್ಲಿ ತುಳುವಿನಲ್ಲೇ ವಿಚಾರಮಂಡಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಸರಕಾರದಿಂದ ದೊರೆತ ಗಟ್ಟಿಭರವಸೆ ಇದಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಪರ ಸದನದಲ್ಲಿ ಉತ್ತರ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ತುಳು ಭಾಷೆ, ಅದರ ಸಂಸ್ಕೃತಿ, ಅದರ ಸೌಂದರ್ಯ, ಪ್ರಾಚೀನತೆ ಎಲ್ಲವೂ ಗೌರವದಿಂದ ಕೂಡಿದೆ. ಸರಕಾರದ ಮುಂದೆ ಈ ಪ್ರಸ್ತಾಪ ಇದೆ.ತುಳುವಿಗೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಲ್ಲಿ ಸರಕಾರಕ್ಕೆ ಮುತುವರ್ಜಿ ಇದೆ. ವೈಯುಕ್ತಿಕವಾಗಿ ಇದರಲ್ಲಿ ನನ್ನ ಆಸಕ್ತಿಯೂ ಇದೆ ಎಂದು ಹೇಳಿದರು.

ತುಳುವಿಗೆ 2000 ವರ್ಷಗಳ ಇತಿಹಾಸವಿದೆ-ಅಶೋಕ್ ಕುಮಾರ್ ರೈ:
ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಅಶೋಕ್ ಕುಮಾರ್ ರೈ, ತುಳುಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ.ತುಳು ಮಾತನಾಡುವ ಮಂದಿ ವಿಶ್ವದೆಲ್ಲೆಡೆ ಇದ್ದಾರೆ.ತುಳು ಭಾಷೆಗೆ ಮಾನ್ಯತೆ ಸಿಗಬೇಕು ಎಂದು ಅನೇಕ ವರ್ಷಗಳಿಂದ ಹೋರಾಟಗಳು ನಡೆಯುತ್ತಿದೆ. ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆ ಇನ್ನೊಂದು ಕಡೆ ಇದೆ ಇದೆಲ್ಲದರ ನಡುವೆ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಆಗ್ರಹವನ್ನು ಶಾಸಕನಾಗಿ ಕಳೆದ ಒಂದು ವರ್ಷದಿಂದ ಮಾಡುತ್ತಿದ್ದೇನೆ.
1994 ರಲ್ಲಿ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ತುಳು ಅಕಾಡೆಮಿಯನ್ನು ಸ್ಥಾಪನೆ ಮಾಡಿದ್ದಾರೆ, 2007 ರಲ್ಲಿ ಕೇರಳ ಸರಕಾರ ತುಳು ಅಕಾಡೆಮಿಯನ್ನು ಸ್ಥಾಪನೆ ಮಾಡಿದೆ, ಆಕಾಶವಾಣಿಯಲ್ಲಿ 1976 ರಿಂದ ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮ ಪ್ರಸಾರವಾಗುತ್ತಿದೆ, ಅಮೇರಿಕಾದಲ್ಲಿ ಸಿಆರ್ ಎಕ್ಸಾಮ್‌ಗೆ ಅರ್ಜಿ ನಮೂನೆಯಲ್ಲೂ ವಿಶ್ವದ 122 ಭಾಷೆಯ ಜೊತೆಗೆ ತುಳುವಿಗೆ ಮಾನ್ಯತೆ ನೀಡಲಾಗಿದೆ, ಗೂಗಲ್ ಸಂಸ್ಥೆಯವರು ತರ್ಜುಮೆ ಮಾಡಬಲ್ಲ ಭಾಷೆಗಳ ಪಟ್ಟಿಯಲ್ಲಿ ತುಳುವನ್ನು ಸೇರ್ಪಡೆ ಮಾಡಿದ್ದಾರೆ. ಇಷ್ಟೆಲ್ಲಾ ಇರುವಾಗ ನಮ್ಮ ರಾಜ್ಯದಲ್ಲಿ ತುಳುವನ್ನು ಅದಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಮೂರು ರಾಜ್ಯಗಳಿಗೆ ಅಧ್ಯಯನ ತಂಡ ಕಳಿಸಿದ್ದೇನೆ
ಬಿಹಾರ, ಪಶ್ಚಿಮ ಬಂಗಾಳ ಮತ್ತು ಆಂದ್ರಕ್ಕೆ ವಿಶೇಷ ಪ್ರತಿನಿಧಿಯನ್ನು ತನ್ನ ಸ್ವಂತ ಖರ್ಚಿನಲ್ಲಿ ಕಳಿಸಿದ್ದೇನೆ. ಈ ಮೂರು ರಾಜ್ಯಗಳಲ್ಲಿ ಸ್ಥಳೀಯ ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಯಾವ ಆಧಾರದಲ್ಲಿ ಘೋಷಣೆ ಮಾಡಿದ್ದಾರೆ ಎಂಬುದನ್ನು ಅಧ್ಯಯನ ನಡೆಸಲಾಗಿದೆ. ಆಂದ್ರದಿಂದ ವರದಿಯನ್ನು ತರಿಸಿದ್ದೇನೆ.. ಈ ವರದಿಯನ್ನು ಸರಕಾರದ ಮುಂದೆ ಇಡಲಿದ್ದು ಅದರ ಆಧಾರದಲ್ಲಿ ಕರ್ನಾಟಕದಲ್ಲಿ ತುಳುವನ್ನು ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ನಾನು ಸ್ವಂತ ಖರ್ಚಿನಲ್ಲೇ ಅಧ್ಯಯನ ತಂಡವನ್ನು ಮೂರು ರಾಜ್ಯಗಳಿಗೆ ಕಳಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ನಿಕ್ಲು ಗಲಾಟೆ ಮಲ್ಪೊಡ್ಚಿ ಈರ್ ಕುಲ್ಲುಲೆ ಮಾರ್ರೆ
ಪುತ್ತೂರು ಶಾಸಕ ಅಶೋಕ್ ರೈಯವರು ಸದನದಲ್ಲಿ ತುಳು ಭಾಷೆಯಲ್ಲಿ ಮಾತನಾಡುವ ವೇಳೆ ಮಂಗಳೂರು ಶಾಸಕ ವೇದವ್ಯಾಸ ಕಾಮತ್‌ ಮಧ್ಯೆ ಮಾತನಾಡಿದಾಗ ಈರ್ ಬೊಕ್ಕ ಪಾತೆರ‍್ಲೆ , ಇತ್ತೆ ಯಾನ್ ಪಾತರೊಂದುಲ್ಲೆ ಎಂದು ಶಾಸಕ ಅಶೋಕ್ ರೈ ವೇದವ್ಯಾಸ ಕಾಮತರಿಗೆ ಹೇಳಿದಾಗ ಮಧ್ಯಪ್ರವೇಶ ಮಾಡಿದ ಸಭಾಪತಿ ಯು ಟಿ ಖಾದರ್ ನಿಕ್ಲು ಗಲಾಟೆ ಮಲ್ಪೊಡ್ಚಿ ಮಾರ್ರೆ ಈರ್ ಕುಲ್ಲುಲೆ ಎಂದು ಶಾಸಕ ವೇದವ್ಯಾಸ ಕಾಮತರಿಗೆ ಕುಳಿತುಕೊಳ್ಳಲು ಹೇಳಿದರು.

ಇದೇನು ಮಂಗಳೂರು ಅಧಿವೇಶನವಾ?-ಆರ್ ಅಶೋಕ್
ಸದನದಲ್ಲಿ ಶಾಸಕ ಅಶೋಕ್ ರೈ ಮತ್ತು ಸಭಾಪತಿ ಯು ಟಿ ಖಾದರ್ ರವರು ತುಳುವಿನಲ್ಲಿ ಮಾತನಾಡುತ್ತಿದ್ದ ವೇಳೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಇದೇನು ಮಂಗಳೂರು ಅಧಿವೇಶನವಾ? ಎಂದು ನಗುತ್ತಲೇ ಹೇಳಿದರು. ಈ ವೇಳೆ ಮಾತನಾಡಿದ ಶಾಸಕ ಅಶೋಕ್ ರೈಯವರು ವಿರೋಧ ಪಕ್ಷದ ನಾಯಕರಾದ ಆರ್ ಆಶೋಕ್ ರವರೇ ನಾವು ತುಳುವಿನಲ್ಲಿ ಮಾತನಾಡಿದ್ದನ್ನು ಕನ್ನಡದಲ್ಲಿ ಹೇಳುತ್ತೇನೆ. ನೀವು ನಮ್ಮ ಹೋರಾಟಕ್ಕೆ , ನಮ್ಮ ಬೇಡಿಕೆಗೆ ಬೆಂಬಲವನ್ನು ನೀಡಬೇಕು, ಇಡೀ ಸದನ ನಮ್ಮ ನಿಲುವಿಗೆ ಬೆಂಬಲ ನೀಡಬೇಕು ಆ ಮೂಲಕ ತುಳು ಭಾಷೆಗೆ ಸರಕಾರದಿಂದ ಮಾನ್ಯತೆ ದೊರೆಯುವಂತಾಗಲಿ ಇದಕ್ಕೆ ಎಲ್ಲರ ಸಹಕಾರವನ್ನು ಕೋರಿದರು. ತುಳುವಿಗೆ ಲಿಪಿ ಇದೆ, ವಿಶ್ವದಲ್ಲೆಡೆ ತುಳು ಮಾತನಾಡುವ ಮಂದಿ ಇದ್ದಾರೆ ಎಂದು ಹೇಳಿದ ಶಾಸಕ ಅಶೋಕ್ ರೈಯವರು ಸಭಾಧ್ಯಕ್ಷೆರೇ ಈರ್ ಸಪೋರ್ಟು ಮಲ್ಪೊಡು, ಈರ್‌ನ ಸಹಕಾರ ಎಂಕ್ಲೆಗ್ ಬೋಡು ಎಂದು ಮನವಿ ಮಾಡಿದರು.

ಅಶೋಕ್ ರೈಗೆ ಅಭಿನಂದನೆ ಸಲ್ಲಿಸಿದ ವೇದವ್ಯಾಸ ಕಾಮತ್
ಸದನದಲ್ಲಿ ಮಾತನಾಡಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ತುಳು ವಿಚಾರದಲ್ಲಿ ಪ್ರಾರಂಭದಿಂದಲೇ ಸರಕಾರದ ಗಮನ ಸೆಳೆದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಭೆಯಲ್ಲಿ ತಿಳಿಸಿದರು.

ನಿಮ್ಮ ಕಾಳಜಿಗೆ ಅಭಿನಂದನೆ;-ಸಚಿವ ಖರ್ಗೆ
ತನ್ನ ಸ್ವಂತ ಖರ್ಚಿನಲ್ಲಿ ಅಧ್ಯಯನ ತಂಡವನ್ನು ಮೂರು ರಾಜ್ಯಕ್ಕೆ ಕಳುಹಿಸುವ ಮೂಲಕ ತನ್ನ ಊರಿನ ಮಾತೃಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎನ್ನುವ ನಿಮ್ಮ ಕಾಳಜಿಗೆ ಸಚಿವ ಪ್ರಿಯಾಂಕ ಖರ್ಗೆ ಶಾಸಕ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸಿದರು. ಮಾತೃಭಾಷೆಯ ಮೇಲೆ ಎಲ್ಲರಿಗೂ ಪ್ರೀತಿ ಇರುತ್ತದೆ ಆದರಲ್ಲೂ ಅಶೋಕ್ ರೈಯವರು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇದ್ದಾರೆ ಎಂದು ಸಚಿವರು ಸಭೆಯಲ್ಲಿ ಹೇಳಿದರು.

ಸರಕಾರಕ್ಕೂ ಮುತುವರ್ಜಿಯಿದೆ-ಪ್ರಿಯಾಂಕ ಖರ್ಗೆ
ಡಾ.ಮೋಹನ್‌ ಆಳ್ವರ ನೇತೃತ್ವದ ಸಮಿತಿಯ ವರದಿಯಲ್ಲಿ ‘ಸಾಧ್ಯವಿದೆ’ ಎಂಬುದರ ಬಗ್ಗೆ ವರದಿ ನೀಡಲಾಗಿದೆ. ತನ್ನ ಸ್ವಂತ ಖರ್ಚಿನಲ್ಲಿ ತಂಡವನ್ನು ಕಳುಹಿಸಿ ಅಧ್ಯಯನ ನಡೆಸಿದ ಶಾಸಕ ಅಶೋಕ್ ರೈಯವರ ಕಾಳಜಿಯನ್ನು ಮೆಚ್ಚಲೇಬೇಕು.ತುಳು ಭಾಷೆ, ಅದರ ಸಂಸ ಸಂಸ್ಕೃತಿ, ಅದರ ಸೌಂದರ್ಯ, ಪ್ರಾಚೀನತೆ, ಎಲ್ಲವೂ ಗೌರವದಿಂದ ಕೂಡಿದೆ.ಸರಕಾರದ ಮುಂದೆ ಈ ಪ್ರಸ್ತಾಪ ಇದೆ.ತುಳುವಿಗೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಲ್ಲಿ ಸರಕಾರಕ್ಕೆ ಮುತುವರ್ಜಿ ಇದೆ.ವೈಯಕ್ತಿಕವಾಗಿ ಈ ಪ್ರಸ್ತಾಪಕ್ಕೆ ನನ್ನ ಬೆಂಬಲವೂ ಇದೆ

ಸಚಿವರ ಸಭೆ ಕರೆದು ತೀರ್ಮಾನಿಸಿ: ಸಭಾಪತಿ
ಈ ವಿಚಾರದಲ್ಲಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಚಿವರನ್ನೊಳಗೊಂಡಂತೆ ಆ ಭಾಗದ ಶಾಸಕರ ಸಭೆಯನ್ನು ಕರೆದು ತೀರ್ಮಾನ ಕೈಗೊಳ್ಳುವಂತೆ ಸಭಾಪತಿ ಯು ಟಿ ಖಾದರ್ ರವರು ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸೂಚನೆಯನ್ನು ನೀಡಿದರು.


ಎರಡನೇ ಬಾರಿಗೆ ತುಳುವಿನಲ್ಲಿ ಮಾತು
ಅಶೋಕ್ ಕುಮಾರ್ ರೈಯವರು ಶಾಸಕನಾಗಿ ಮೊದಲ ಅಧಿವೇಶನದಲ್ಲೇ ತುಳುವಿನಲ್ಲಿ ಮಾತನಾಡಿ ಗಮನ ಸೆಳೆದಿದ್ದರು. ಅವರು ಅಧಿವೇಶನದ ಇತಿಹಾಸದಲ್ಲೇ ಮೊದಲ ಬಾರಿಗೆ ತುಳುವಿನಲ್ಲಿ ಮಾತನಾಡುವ ಮೂಲಕ ತುಳುವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ ಎಂದು: • ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಅವರು ಎರಡನೇ ಬಾರಿಗೆ ಅಧಿವೇಶನದಲ್ಲಿ ತುಳುವಿನಲ್ಲಿಯೇ ಮಾತನಾಡಿ ಮತ್ತೊಮ್ಮೆ ತುಳುವರ ಗಮನ ಸೆಳೆದಿದ್ದಾರೆ.

ವೇದವ್ಯಾಸ ಕಾಮತ್

ಸರಕಾರಕ್ಕೂ ಸಮುತುವರ್ಜಿ ಇದೆ

2) 2

LEAVE A REPLY

Please enter your comment!
Please enter your name here