ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬಿಜು ಪಾರಪ್ಪುರಮ್ ಅವರಿಗೆ ಸನ್ಮಾನ

0

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯವು ರಜತ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ನಡೆದ ವಾರ್ಷಿಕ ನೋವೇನಾ ಮಹೋತ್ಸವದ ವೇಳೆ ಬೆಳ್ತಂಗಡಿ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಅವರ ಆಪ್ತ ಸಹಾಯಕ ಹಾಗೂ ವಾಹನ ಚಾಲಕರಾಗಿ 25 ವರ್ಷಗಳ ಸೇವೆ ಸಲ್ಲಿಸಿರುವ ಬೆಳ್ತಂಗಡಿ ಉದಯನಗರ ನಿವಾಸಿ ಬಿಜು ಪಾರಪ್ಪುರಮ್ ಅವರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.

ಬಿಜು ಅವರ ನಿಷ್ಠೆ, ಸೇವಾ ಮನೋಭಾವನೆ, ಶ್ರದ್ದೆ ಮತ್ತು ಕರ್ಮ ಕುಶಲತೆಯನ್ನು ಧರ್ಮಗುರು ಫಾದರ್ ಶಾಜಿ ಮಾತ್ಯು ಬಣ್ಣಿಸಿ, ಅವರ ಸೇವೆಯನ್ನು ಪ್ರಶಂಸೆ ಮಾಡಿದರು. ಈ ಸಂದರ್ಭದಲ್ಲಿ ಧರ್ಮಾಧ್ಯಕ್ಷ ವಂದನೀಯ ಮಾರ್ ಲಾರೆನ್ಸ್ ಮುಕ್ಕುಯಿ, ಬೆಳ್ತಂಗಡಿ ಧರ್ಮ ಪ್ರಾಂತ್ಯದ ಚಾನ್ಸಲರ್ ವಂದನೀಯ ಫಾದರ್ ಲಾರೆನ್ಸ್ ಪೂಣೋಲಿಲ್, ವಂದನೀಯ ಸಿಸ್ಟರ್ ಲಿಸ್ ಮಾತ್ಯು ಎಸ್.ಎಚ್., ಟ್ರಸ್ಟಿಗಳಾದಅಲೆಕ್ಸ್, ಫಾದರ್ ಎಬಿನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here