ಅಧ್ಯಕ್ಷ: ಮೋಹನ್‌ದಾಸ್ ಶೆಟ್ಟಿ, ಕಾರ್ಯದರ್ಶಿ: ವಿನೋದ್‌ಕುಮಾರ್
ರಾಮಕುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಕೊಯಿಲ-ರಾಮಕುಂಜ ಇದರ ಅಧ್ಯಕ್ಷರಾಗಿ ಮೋಹನ್‌ದಾಸ್ ಶೆಟ್ಟಿ ಬಡಿಲ ಕೆಮ್ಮಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿನೋದ್‌ಕುಮಾರ್ ಪಲ್ಲಡ್ಕ ಆಯ್ಕೆಯಾಗಿದ್ದಾರೆ.
ಜು.21ರಂದು ಗೋಕುಲನಗರದಲ್ಲಿರುವ ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಜರಗಿದ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಉದಯ್ ಕಶ್ಯಪ್, ಗೌರವ ಕಾರ್ಯದರ್ಶಿಯಾಗಿ ಪುರುಷೋತ್ತಮ ಗೋಕುಲನಗರ-ಕೊಯಿಲ, ಉಪಾಧ್ಯಕ್ಷರಾಗಿ ಶಿವರಾಮ ಭಟ್ ಕಂಪ, ಪದ್ಮನಾಭ ಶೆಟ್ಟಿ ಬಡಿಲ, ಬಾಬು ಕುಲಾಲ್ ಪಾದೆ, ಜೊತೆ ಕಾರ್ಯದರ್ಶಿಯಾಗಿ ವಾಮನ ಬರಮೇಲು, ದೀಕ್ಷಿತ್ ಪೂರಿಂಗ, ಕ್ರೀಡಾ ಕಾರ್ಯದರ್ಶಿಯಾಗಿ ಸುಧೀಶ್ ಪಟ್ಟೆ, ಜೊತೆ ಕ್ರೀಡಾಕಾರ್ಯದರ್ಶಿಯಾಗಿ ರೂಪೇಶ್ ಪುತ್ಯೆ, ಕೋಶಾಧಿಕಾರಿಯಾಗಿ ಚಿತ್ತರಂಜನ್ ರಾವ್ ಬದೆಂಜ ಆಯ್ಕೆಯಾಗಿದ್ದಾರೆ. ಸಂಚಾಲಕರಾಗಿ ಮನೋಹನ್ ಪುಣಿಕೆತ್ತಡಿ, ಅಶೋಕ್ ಕೊಯಿಲ, ಯದುಶ್ರೀ ಆನೆಗುಂಡಿ, ಸುಧಾಕೃಷ್ಣ ಪಿ.ಎನ್., ಯೋಗೀಶ್ ಕುಲಾಲ್ ಅಜ್ಜಿಕುಮೇರು, ಪ್ರಕಾಶ್ ಕೆ.ಆರ್., ಸುದರ್ಶನ್ ಕೇದಗೆದಡಿ, ಶ್ರೀಶಕುಮಾರ್ ಆಯ್ಕೆಯಾಗಿದ್ದಾರೆ. ಸೆ.1ರಂದು ಕೊಯಿಲ ಗ್ರಾ.ಪಂ.ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ, ಆಟೋಟ ಸ್ಪರ್ಧೆ, ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ, ನಿವೃತ್ತರಿಗೆ ಸನ್ಮಾನ, ವಿಶೇಷ ಆಕರ್ಷಣೆಯಾಗಿ ಕುಣಿತ ಭಜನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಶ್ರದ್ಧಾಂಜಲಿ:
ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದು ಇತ್ತೀಚೆಗೆ ನಿಧನರಾದ ವಾಸಪ್ಪ ಬಂಗ ಅವರಿಗೆ ಸಭೆಯ ಪ್ರಾರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುರುಷೋತ್ತಮ ಗೋಕುಲನಗರ-ಕೊಯಿಲ ಅವರು ನುಡಿನಮನ ಸಲ್ಲಿಸಿದರು.