ಪುತ್ತೂರು: ಎಸ್ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖೆಯ ವತಿಯಿಂದ ಹೈನುಗಾರಿಕೆ ಉದ್ಧೇಶಕ್ಕಾಗಿ ಕಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯೆ ರಮ್ಯಾರವರಿಗೆ ರೂ.82 ಸಾವಿರದ ಚೆಕ್ ಹಸ್ತಾಂತರಿಸಲಾಯಿತು. ನಿಡ್ಪಳ್ಳಿ ಗ್ರಾಮದ ಕೋಡಿ ನಿವಾಸಿಯಾದ ರಮ್ಯಾ ಮತ್ತು ಲಕ್ಷ್ಮಣ ಕೋಡಿ ದಂಪತಿ ಹೈನುಗಾರಿಕೆ ನಡೆಸುತ್ತಿದ್ದು ಕಕ್ಕೂರು ಹಾಳು ಉತ್ಪಾದಕರ ಸಹಕಾರ ಸಂಘಕ್ಕೆ ದಿನವಹಿ 35 ಲೀ. ಹಾಲು ಪೂರೈಸುತ್ತಿದ್ದಾರೆ. ಇವರಿಗೆ ದುಡಿಯವ ಬಂಡವಾಳವಾಗಿ ಸಾಲ ವಿತರಿಸಲಾಯಿತು.
ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ದ.ಕ.ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳೆಜ್ಜ ಸಾಲದ ಚೆಕ್ ಹಸ್ತಾಂತರಿಸಿದರು. ಹೈನುಗಾರಿಕೆ ಪ್ರೋತ್ಸಾಹಿಸುವ ಸಲುವಾಗಿ ಒಂದು ದನಕ್ಕೆ ರೂ.20 ಸಾವಿರದಂತೆ 4 ದನಕ್ಕೆ ಸಾಲದ ಸೌಲಭ್ಯವನ್ನು ಎಸ್ಸಿಡಿಸಿಸಿ ಬ್ಯಾಂಕ್ ರೈತರಿಗೆ ನೀಡುತ್ತಿದೆ ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬಹುದು ಎಂದು ಎಸ್.ಬಿ.ಜಯರಾಮ ರೈ ಬಳೆಜ್ಜ ಹೇಳಿದರು. ಎಸ್ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖೆಯ ವ್ಯವಸ್ಥಾಪಕಿ ಜಲಜ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ ಹಾಗೂ ಲಕ್ಷ್ಮಣ ಕೋಡಿ ಉಪಸ್ಥಿತರಿದ್ದರು.