ಮುಕ್ರಂಪಾಡಿ: ವೇಗದ ಮಿತಿ ದಾಟಿದ ವಾಹನಗಳಿಗೆ ‘ರಾಡಾರ್ ಗನ್’ ಮುಖೇನ ಬಿತ್ತು ದಂಡ

0

ಪುತ್ತೂರು: ಗಂಟೆಗೆ 40ಕಿ.ಮಿಗಿಂತಲೂ ಅಧಿಕ ವೇಗದಿಂದ ಚಲಾಯಿಸಿದ ವಾಹನಗಳನ್ನು ರಾಡಾರ್ ಗನ್ ಮೂಲಕ ಗುರುತಿಸಿದ ಪುತ್ತೂರು ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ಘಟನೆ ಮುಕ್ರಂಪಾಡಿಯಲ್ಲಿ ಜು.24 ರಂದು ನಡೆದಿದೆ.

ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದ ಎದುರು ವಾಹನಗಳ ವೇಗದ ನಿಯಂತ್ರಣಕ್ಕೆ ರಸ್ತೆಯ ಎರಡೂ ಬದಿಗಳಲ್ಲಿ ಹಾಕಲಾಗಿರುವ ಗಂಟೆಗೆ 40ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಿ ಎನ್ನುವ ಫಲಕದ ಜೊತೆಗೆ ರಸ್ತೆಯಲ್ಲಿ ಬಿಳಿ ಬಣ್ಣದ ಸ್ಪೀಡ್ ಬ್ರೇಕರ್ ಅಳವಡಿಸಲಾಗಿತ್ತು. ಆದರೂ ವಾಹನ ಸವಾರರು ವೇಗದ ಮಿತಿಯನ್ನು ಲೆಕ್ಕಿಸದೆ ತಮ್ಮ ವಾಹನವನ್ನು 40ಕಿ.ಮಿ ಗಿಂತಲೂ ಹೆಚ್ಚಿನ ವೇಗದಲ್ಲಿ ಚಲಾಯಿಸುತ್ತಿರುವುದು ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿದೆ. ಸರಕಾರದ ನಿರ್ದೇಶನದಂತೆ ಅಂತಹ ವಾಹನ ಸವಾರರಿಗೆ ರಾಡಾರ್ ಗನ್ ಮೂಲಕ ದಂಡ ವಿಧಿಸುವ ಕಾರ್ಯಾಚರಣೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ.

ವೇಗದ ಮಿತಿಯನ್ನು ದಾಟಿ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ರಾಡಾರ್ ಗನ್ ಮೂಲಕ ವೇಗದ ಮಿತಿಯನ್ನು ಗುರುತಿಸಿ ದಂಡ ವಿಧಿಸಲಾಯಿತು. ಈ ಸಂದರ್ಭದಲ್ಲಿ ಕೆಲವೊಂದು ವಾಹನಗಳು ಪೊಲೀಸರ ಆದೇಶವನ್ನು ಧಿಕ್ಕರಿಸಿ ಸಾಗಿರುವುದು ಕೂಡ ಕಂಡು ಬಂತು.

LEAVE A REPLY

Please enter your comment!
Please enter your name here