ಸವಣೂರು : ಬಿಜೆಪಿ ಪಾಲ್ತಾಡಿ ಶಕ್ತಿ ಕೇಂದ್ರ ಪ್ರಮುಖ್ ಆಗಿ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ ಅವರು ಆಯ್ಕೆಯಾದರು. ಬೂತ್ 70ರ ಅಧ್ಯಕ್ಷರಾಗಿ ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಆಯ್ಕೆಯಾದರು.ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸಿದ್ದಿವಿನಾಯಕ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.
ಮತಗಟ್ಟೆ ಏಜೆಂಟ್ ಆಗಿ ಸಂದೀಪ್ ರೈ ಕುಂಜಾಡಿ, ಬಿ.ಎಲ್.ಎ 2 ಆಗಿ ಈಶ್ವರ್ ಕೆ.ಎಸ್,ಮಹಿಳಾ ಸದಸ್ಯರಾಗಿ ಸವಣೂರು ಗ್ರಾ.ಪಂ.ಸದಸ್ಯೆ ಹರಿಕಲಾ ರೈ ಕುಂಜಾಡಿ, ಎಸ್.ಸಿ.ಸದಸ್ಯರಾಗಿ ಗುರುರಾಜ್ ,ಎಸ್.ಟಿ. ಸದಸ್ಯರಾಗಿ ವಿಮಲಾ ,ಓಬಿಸಿ ಸದಸ್ಯರಾಗಿ ವಿಠಲ ಶೆಟ್ಟಿ ಬಂಬಿಲ,ಕಾರ್ಯಕಾರಿ ಸದಸ್ಯರಾಗಿ ಹೊನ್ನಪ್ಪ ಗೌಡ,ಹರೀಶ್ ರೈ ಮಂಜುನಾಥನಗರ,ನಿತ್ಯಪ್ರಸಾದ್ ಶೆಟ್ಟಿ, ಸಂತೋಷ್ ಮಂಜುನಾಥನಗರ ಆಯ್ಕೆಯಾದರು.
ಸದಸ್ಯರಾಗಿ ಸುಬ್ರಾಯ ಗೌಡ ಬಿ., ದೀಕ್ಷಿತ್ ಜೈನ್ ಚೆನ್ನಾವರ, ಪ್ರವೀಣ್ ಬಂಬಿಲದೋಳ, ದೇವಿಪ್ರಸಾದ್ ಕಾಪಿನಮೂಲೆ,ನಂದ ಕುಮಾರ್ ಚೆನ್ನಾವರ, ಧೀರಜ್ ರೈ ಪಟ್ಟೆ,ಪ್ರಜ್ವಲ್ ರೈ ಪಟ್ಟೆ, ನಿತೇಶ್ ಮಡಿವಾಳ ಚೆನ್ನಾವರ,ಮುತ್ತಪ್ಪ ಬಂಬಿಲ,ಪ್ರಜ್ವಲ್ ಬಂಬಿಲ,ದೀಕ್ಷಿತ್ ಬಂಬಿಲ,ಆಶಿತ್ ರೈ ಕುಂಜಾಡಿ, ತಾರೇಶ್ ಕುಂಜಾಡಿ,ಸುರೇಶ್ ಬಂಬಿಲದೋಳ,ಪುಟ್ಟಣ್ಣ ಮಡಿವಾಳ,ಪ್ರಶಾಂತ್ ಜಾರಿಗೆತ್ತಡಿ, ವಿಶೇಷ ಆಹ್ವಾನಿತರಾಗಿ ಪದ್ಮಪ್ರಸಾದ್ ಆರಿಗ ಪಂಚೋಡಿ,ಗಣೇಶ್ ಶೆಟ್ಟಿ ಕುಂಜಾಡಿ, ಸುಧಾಕರ ರೈ ಕುಂಜಾಡಿ, ಸುಧೀರ್ ಕುಮಾರ್ ರೈ ಕುಂಜಾಡಿ, ಬಾಳಪ್ಪ ಪೂಜಾರಿ ಬಂಬಿಲದೋಳ, ಲೋಕಯ್ಯ ಗೌಡ ಅಂಗಡಿಮೂಲೆ, ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಸದಸ್ಯೆ ವಿನೋದಾ ರೈ ,ಮಾಜಿ ಉಪಾಧ್ಯಕ್ಷ ರವಿಕುಮಾರ್ ಅವರನ್ನು ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ತಾರಾನಾಥ ಕಾಯರ್ಗ, ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ,ಬೂತ್ 70 ರ ಅಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ,ಕಾರ್ಯದರ್ಶಿ ಹೊನ್ನಪ್ಪ ಗೌಡ ಜಾರಿಗೆತ್ತಡಿ ಉಪಸ್ಥಿತರಿದ್ದರು.