ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಗುರುಪೂರ್ಣಿಮೆ, ಗುರುವಂದನಾ ಕಾರ್ಯಕ್ರಮ

0

ಪುತ್ತೂರು: ಬನ್ನೂರು ಕೃಷ್ಣನಗರದಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರು ಪೂರ್ಣಿಮೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಸಲಾಯಿತು.


ಮುಖ್ಯ ಅತಿಥಿತಿಯಾಗಿ ಸಂದರ್ಶಕ ಉಪನ್ಯಾಸಕರಾದ ಪೂರ್ಣಾತ್ಮರಾಮ ಅವರು ಗುರು ಪೂರ್ಣಿಮೆಯ ಮಹತ್ವ ಹಾಗೂ ವೇದವ್ಯಾಸರ ಪರಿಪೂರ್ಣ ವ್ಯಕ್ತಿತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲೆ ಜಯಲಕ್ಷ್ಮಿ ಕೆ ಅವರನ್ನು ಶಾಲೆಯ ಸಂಚಾಲಕ ಎ.ವಿ. ನಾರಾಯಣ ಹಾಗೂ ಪ್ರತಿಭಾ ದೇವಿ ದಂಪತಿ ಗೌರವಿಸಿ ಗುರುವಂದನೆ ಸಲ್ಲಿಸಿ ಗೌರವಿಸಿದರು. ಗುರುವಂದನೆ ಸ್ವೀಕರಿಸಿದ ಜಯಲಕ್ಷ್ಮಿ ರವರು ಮಾತನಾಡಿ ಗುರು ಹಾಗೂ ಶಿಷ್ಯರ ಸಂಬಂಧದ ಬಗ್ಗೆ ಶಿಕ್ಷಣ ಸಂಸ್ಥೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ ಉಪಸ್ಥಿತರಿದ್ದರು. ಎವಿಜಿ ಶಾಲೆಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಂಸ್ಥೆಯ ಗುರುವೃಂದದವರಿಗೆ ಪ್ರಣಾಮವನ್ನು ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಪುಷ್ಪಾವತಿ ಕಳುವಾಜೆ, ಗಂಗಾಧರ ಗೌಡ, ಪ್ರತಿಭಾ ದೇವಿ, ವಾಮನ ಗೌಡ ಹಾಗೂ ಸಂಸ್ಥೆಯ ಹಿತೈಷಿ ನಿವೃತ್ತ ಉಪನ್ಯಾಸಕಿ ವಾರಿಜ ಕಾಣಿಚ್ಚಾರು ಶಿಕ್ಷಕವೃಂದ ಬೋಧಕೇತರ ವೃಂದ ಪೋಷಕವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿಯರಾದ ಹರ್ಷಿತರವರು ಪ್ರಾರ್ಥಿಸಿ, ರಾಧಾ ರವರು ಸ್ವಾಗತಿಸಿದರು. ರಂಜಿತಾ ರೈ ಅವರು ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿದರು. ಸಂಸ್ಥೆಯ ಉಪಾಧ್ಯಕ್ಷ ಉಮೇಶ್ ಮಳುವೇಲು ವಂದಿಸಿದರು. ಯಶುಭ ರೈ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here