ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಆ. 10 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿರುವ ಆಟಿಡೊಂಜಿ ಬಂಟೆರೆ ಸೇರಿಗೆ ಕಾರ‍್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದ್ದು, ಸನ್ಮಾನಿತರ ನಿವಾಸಕ್ಕೆ ಜು. 25 ರಂದು ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಪದಾಽಕಾರಿಗಳು ಭೇಟಿ ನೀಡಿ, ಗೌರವಪೂರ್ವಕವಾಗಿ ಸಮಾರಂಭದ ಅಮಂತ್ರಣ ನೀಡಿ, ಕಾರ‍್ಯಕ್ರಮಕ್ಕೆ ಆಹ್ವಾನಿಸಿದರು.
ಆಟಿಡೊಂಜಿ ಬಂಟೆರೆ ಸೇರಿಗೆ ಕಾರ‍್ಯಕ್ರಮದ ಮುಖ್ಯ ಅತಿಥಿ ‘ಸಹಕಾರತ್ನ’ ಸವಣೂರು ಕೆ.ಸೀತಾರಾಮ ರೈ, ಸಿರಿ ಕಡಮಜಲು ಕೃಷಿ ಪ್ರಶಸ್ತಿ ಪುರಸ್ಕೃತ ಅರಿಯಡ್ಕ ಕೃಷ್ಣ ರೈ, ರೈಸ್ ಬೌಲ್ ಪುಣ್ಚಪ್ಪಾಡಿ, ಹಿರಿಯ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಕ್, ಪುತ್ತೂರು ಬಂಟಸಿರಿ ಪ್ರಶಸ್ತಿ ಪುರಸ್ಕೃತರಾದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಸಾಧಕ ಸಹಕಾರಿ ರಶ್ಮಿ ಪ್ರಶಸ್ತಿ ಪುರಸ್ಕೃತ ಎನ್.ಜಗನ್ನಾಥ ರೈ ಮಾದೋಡಿ, ಬೂಡಿಯಾರ್ ವೈದ್ಯಕೀಯ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತ ಡಾ.ಎ.ಕೆ.ರೈ, ಪಂಚಮಿ ಉದ್ಯಮ ಸಿರಿ ಪ್ರಶಸ್ತಿ ಪುರಸ್ಕೃತ ಸಂತೋಷ್ ಕುಮಾರ್ ರೈ ನಳೀಲು, ದೇಶ ಸೇವಾ ಆಗರಿ ಪ್ರಶಸ್ತಿ ಪುರಸ್ಕೃತ ವಸಂತ ಕುಮಾರ್ ರೈ, ಉತ್ತಮ ಶಿಕ್ಷಕ ಅಶ್ವಿನಿ ಪ್ರಶಸ್ತಿ ಪುರಸ್ಕೃತ ಸತೀಶ್ ರೈ, ಪ್ರತಿಭಾನ್ವಿತ ವಿದ್ಯಾ ಚನಿಲ ಪ್ರಶಸ್ತಿ ಪುರಸ್ಕೃತ ಸ್ವಸ್ತಿ ಶೆಟ್ಟಿರವರುಗಳ ನಿವಾಸಕ್ಕೆ ಭೇಟಿ ನೀಡಿ ಆಹ್ವಾನಿಸಲಾಯಿತು. ಬಂಟರ ಸಂಘದ ಪ್ರಧಾನ ಕಾರ‍್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಽಕಾರಿ ಸಂತೋಷ್ ಶೆಟ್ಟಿ ಸಾಜ, ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಕಡಮಜಲು ಸುಭಾಸ್ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಪುರಂದರ ರೈ ಮಿತ್ರಂಪಾಡಿ, ಕರುಣಾಕರ ರೈ ದೇರ್ಲ, ಬಂಟರ ಸಂಘದ ನಿರ್ದೇಶಕರುಗಳಾದ ಶಿವನಾಥ ರೈ ಮೇಗಿನಗುತ್ತು, ರವಿಪ್ರಸಾದ್ ಶೆಟ್ಟಿ ಬನ್ನೂರು, ಪ್ರಕಾಶ್ ರೈ ಸಾರಕರೆ, ಮಹಿಳಾ ಬಂಟರ ವಿಭಾಗದ ಕಾರ‍್ಯದರ್ಶಿ ಕುಸುಮ ಪಿ.ಶೆಟ್ಟಿ ಕೆರೆಕೋಡಿ, ರಾಜ್ ದೀಪಕ್ ಶೆಟ್ಟಿ ಮಠರವರುಗಳು ಉಪಸ್ಥಿತರಿದ್ದರು.