ಅಂಕತಡ್ಕ : ದಿ.ಪ್ರವೀಣ್ ನೆಟ್ಟಾರು ಸ್ಮಾರಕ ವೀರ ಸಾವರ್ಕರ್ ವೃತ್ತದಲ್ಲಿ ಪ್ರವೀಣ್ ನೆಟ್ಟಾರು ಸ್ಮೃತಿ ದಿನ

0

ಸವಣೂರು : ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿರುವ ದಿ.ಪ್ರವೀಣ್ ನೆಟ್ಟಾರು ಸ್ಮಾರಕ ವೀರ ಸಾವರ್ಕರ್ ವೃತ್ತದಲ್ಲಿ ಬಿಜೆಪಿ ಬೂತ್ ಸಮಿತಿ 70ರ ವತಿಯಿಂದ ಪ್ರವೀಣ್ ನೆಟ್ಟಾರು ಸ್ಮೃತಿ ದಿನ ನಡೆಯಿತು.ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ. ಅವರು, ದಿ.ಪ್ರವೀಣ್ ನೆಟ್ಟಾರು ಸಂಸ್ಮರಣೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ  ತಾರಾನಾಥ ಕಾಯರ್ಗ, ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಪಾಲ್ತಾಡಿ ಶಕ್ತಿ ಕೇಂದ್ರದ ಪ್ರಮುಖ್ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ,ಬೂತ್ 70ರ ಅಧ್ಯಕ್ಷ, ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಕಾರ್ಯದರ್ಶಿ ಪ್ರವೀಣ್ ಕುಮಾರ್,  ಬೂತ್ 71ರ ಅಧ್ಯಕ್ಷ ಜಯಪ್ರಶಾಂತ್ ಪಲ್ಲತಡ್ಕ ,ಸವಣೂರು ಗ್ರಾ.ಪಂ.ಸದಸ್ಯರಾದ ಭರತ್ ರೈ ಕಲಾಯಿ,ಚೇತನಾ ಶಿವಾನಂದ,ಹರೀಶ್ ಕಾಯರಗುರಿ ,ಬೂತ್ 71ರ ಮಾಜಿ ಅಧ್ಯಕ್ಷ ಕರುಣಾಕರ ಸಾಲ್ಯಾನ್ ಕಲ್ಲಕಟ್ಟ ಸೇರಿದಂತೆ ಪಕ್ಷದ ಕಾರ್ಯಕರ್ತರು, ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.ಬಳಿಕ ಪ್ರವೀಣ್ ನೆಟ್ಟಾರು ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here